ಬೆಳಗಾವಿ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Belagavi loksabha election 2019Live updates

[$--lok#2019#state#karnataka--$]

ಕುಂದಾನಗರಿಯಲ್ಲಿ ಈಗಾಗಲೇ ಹ್ಯಾಟ್ರಿಕ್ ಜಯಗಳಿಸಿರುವ ಬಿಜೆಪಿಯ ಸುರೇಶ್ ಅಂಗಡಿ ನಾಲ್ಕನೇ ಬಾರಿ ಕಣದಲ್ಲಿದ್ದಾರೆ. 2019 ರ ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ನ ಡಾ.ಎಸ್.ವಿ.ಸಾಧುನವರ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ – ಬಿಜೆಪಿ ನೇರ ಪೈಪೋಟಿ ನಡೆದಿದೆ.
 
ಲೋಕಸಭೆ ವ್ಯಾಪ್ತಿಯ 8 ರಲ್ಲಿ 5 ಕಡೆ ಬಿಜೆಪಿ ಶಾಸಕರು ಮತ್ತು ಉಳಿದವರು ಕಾಂಗ್ರೆಸ್ ಶಾಸಕರಿದ್ದಾರೆ. ಲೋಕ ಸಮರದಲ್ಲಿ ಬಿಜೆಪಿ ಇಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. 
 
2014ರ ಕಣದಲ್ಲಿದ್ದ ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಬಿಜೆಪಿ ಸುರೇಶ ಅಂಗಡಿ 75 ಸಾವಿರ ಮತಗಳ ಅಂತರದಿಂದ ಸೋಲಿನ ರುಚಿ ತೋರಿಸಿದ್ದರು. 
 
ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ ಕಳೆದ ಮೂರು ಬಾರಿಯೂ ಸುರೇಶ ಅಂಗಡಿ ಜಯದ ನಗೆ ಬೀರಿದ್ದಾರೆ. 
[$--lok#2019#constituency#karnataka--$]
ಒಟ್ಟು 17,49,005 ರಲ್ಲಿ 8,79,619 ಪುರುಷರು, 8,69,333 ಮಹಿಳೆಯರು ಹಾಗೂ 53 ಇತರೆ ಮತದಾರರು ಇಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ