ಕೂದಲು ಬೆಳ್ಳಗಾಗೋದನ್ನು ತಡೆಯಲು ಈಗೋ ಬಂದಿದೆ ಹಣ್ಣಿನ ಗುಳಿಗೆ!

WD
ಅನಿವಾರ್ಯವೂ, ವಯಸ್ಸಾಗುವುದರ ಮುನ್ಸೂಚನೆಯೂ ಆಗಿರುವ ಕೂದಲ ನರೆತವನ್ನು ತಡೆಯಲು ವಿಜ್ಞಾನಿಗಳು ಸುಲಭ ಸೂತ್ರವೊಂದನ್ನು ಕಂಡು ಹುಡುಕಿದ್ದಾರೆ. ಹಣ್ಣಿನ ರಸದಿಂದ ತಯಾರಿಸಿದ ಒಂದು ಗುಳಿಗೆಯೇ ಬಿಳಿ ಕೂದಲು ಹೆಚ್ಚಾಗುವುದನ್ನು ನಿವಾರಿಸುತ್ತದೆ ಎನ್ನುತ್ತಾರೆ ಈ ವಿಜ್ಞಾನಿಗಳು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜಾಗತಿಕ ಶೃಂಗಾರಸಾಧನಗಳ ದೈತ್ಯ ಕಂಪನಿ ಲೋರಿಯಲ್ (L'Oreal) ತಂಡವು ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಯೋಗಗಳ ಮೂಲಕ ಇದನ್ನು ತಯಾರಿಸಿದ್ದು, ನಾಲ್ಕು ವರ್ಷದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಪುರುಷರು ಹಾಗೂ ಮಹಿಳೆಯರೂ ಇದನ್ನು ಮೆಚ್ಚಿಕೊಳ್ಳುತ್ತಾರೆಂಬ ನಂಬಿಕೆ ನಮ್ಮದು. ಪಥ್ಯಾಹಾರದ ರೀತಿಯಲ್ಲೇ ಈ ಗುಳಿಗೆಯನ್ನೂ ಸೇವಿಸಬಹುದಾಗಿದ್ದು, ಇದು ದುಬಾರಿಯೂ ಆಗಿರುವುದಿಲ್ಲ ಎಂದು ಕಂಪನಿಯ ರೋಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಬ್ರೂನೋ ಬರ್ನಾರ್ಡ್ ಹೇಳಿದ್ದಾರೆ.

ಟೈರೋಸಿನೇಸ್ ಸಂಬಂಧಿತ ಪ್ರೊಟೀನ್ 2 ಎಂಬ, ಕೂದಲಿನ ಬಣ್ಣ ಬದಲಾವಣೆಯನ್ನು ತಡೆಯುವ ಕಿಣ್ವದ ಮಾದರಿಯಲ್ಲೇ ಒಂದು ಅಜ್ಞಾತ ಹಣ್ಣಿನಿಂದ ಈ ರಾಸಾಯನಿಕ ಸಂಯುಕ್ತವನ್ನು ಈ ಔಷಧವು ಬಳಸುತ್ತದೆ. ಇದು ಕೂದಲಿನ ಜೀವಕೋಶಗಳು ಹಾನಿಕಾರಕ ಆಂಟಿ-ಆಕ್ಸಿಡೆಂಟ್‌ಗಳಿಂದ ಪ್ರಭಾವಿತವಾಗಿ ಬೆಳ್ಳಗಾಗುವ 'ಆಕ್ಸಿಡೇಟಿವ್ ಒತ್ತಡ'ವನ್ನು ತಡೆಯುವ ಪರಿಣಾಮವನ್ನು ಹೊಂದಿರುತ್ತದೆ.

ಸಾಮಾನ್ಯವಾಗಿ ಇದನ್ನು ಇಡೀ ಜೀವನದಲ್ಲಿ ತೆಗೆದುಕೊಳ್ಳಬೇಕಾಗಬಹುದು. ಆದರೆ ಜನರು ತಮ್ಮ ಕೂದಲು ಬೆಳ್ಳಗಾಗುವ ಮೊದಲೇ ಈ ಔಷಧಿ ಸೇವನೆ ಆರಂಭಿಸುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಏಕೆಂದರೆ, ಒಮ್ಮೆ ಕೂದಲು ಬಿಳಿಯಾಗುವಿಕೆ ಆರಂಭವಾದ ನಂತರ ಅದನ್ನು ಪರಿಪೂರ್ಣವಾಗಿ ತಡೆದು ಹಿಂದಿನ ಸ್ಥಿತಿಗೆ ತರುವುದು ಸಾಧ್ಯವಾಗದು ಎಂದು ಬರ್ನಾರ್ಡ್ ಹೇಳಿದ್ದಾರೆ.

ಈಗಾಗಲೇ ಈ ಔಷಧಿಯು ತಜ್ಞರ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ಮೇ 2013ರಲ್ಲಿ ನಡೆಯಲಿರುವ ವಿಜ್ಞಾನ ಸಮಾವೇಶವೊಂದರಲ್ಲಿ ಈ ಹೊಸ ಗುಳಿಗೆಯು ಅನಾವರಣಗೊಳ್ಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ