ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಮಂಗಳವಾರ, 24 ಡಿಸೆಂಬರ್ 2013 (17:27 IST)
PR
ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ಚ್ಯೂಯಿಂಗ್‌ ಗಮ್‌‌ ತಿನ್ನೋದರಿಂದ ತಲೆ ನೋವು ಬರುವುದು ಗ್ಯಾರೆಂಟಿ .

ಇಸ್ರೇಲ್‌‌ನಲ್ಲಿ ತೆಲ ಅವಿವ್ ವಿಶ್ವವಿದ್ಯಾಲಯದ ಮೆರ ಮೆಡಿಕಲ್‌ ಸೆಂಟರ್‌ ಸಂಶೋಧನೆಯಿಂದ ಈ ಮಾಹಿತಿ ಹೊರ ಬಂದಿದೆ. ಹುಡುಗರಿಗೆ ಇತ್ತೀಚಿನ ದಿನಗಳಲ್ಲಿ ಚ್ಯೂಯಿಂಗ್‌ ಗಮ್‌ ತಿನ್ನುವುದು ಹೆಚ್ಚುತ್ತಲಿದೆ , ಆದರೆ ನೆನಪಿರಲಿ ಹೆಚ್ಚಿನ ಚ್ಯೂಯಿಂಗ್‌ ಗಮ್‌‌ ತಿನ್ನುವುದರ ಜೊತೆಗೆ ತಲೆ ನೋವು ಕೂಡ ಬರುತ್ತದೆ.

ಮೆರ್ ಮೆಡಿಕಲ್‌ ಸೆಂಟರ್‌ನ ಡಾ ನೌಥನ್‌‌ ಬಾಟ್ರೆಮಬಗ್ರ್‌ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯಲ್ಲಿ ತಿಳಿಸಿದ ಪ್ರಕಾರ ಚ್ಯೂಯಿಂಗ್‌ ಗಮ್‌ ತಿನ್ನುವುದು ನಿಲ್ಲಿಸಿದರೆ ತಲೆ ನೋವು ಬರುವುದಿಲ್ಲ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

PR
6 ರಿಂದ 19 ವಯಸ್ಸಿನ ಜನರಿಗೆ ಸತತ ಒಂದು ತಿಂಗಳುಗಳ ಕಾಲ ಚ್ಯೂಯಿಂಗ್ ಗಮ್‌ ತಿನಿಸಲಾಗಿತ್ತು , ಇದರಲ್ಲಿ ಕೆಲವರು 6 ಗಂಟೆಗಿಂತಲೂ ಹೆಚ್ಚಿನ ಅವಧಿಯವರೆಗೆ ಚ್ಯೂಯಿಂಗ್‌ಗಮ್ ಜಗಿಯುತ್ತಿದ್ದರು ಎಂದು ಡಾ ನೌಥನ್‌‌ ಬಾಟ್ರೆಮಬಗ್ರ್‌ ಸಂಶೋಧನೆಯಲ್ಲಿ ಈ ಮಾಹಿತಿ ಹೊರ ಬಂದಿದೆ .

1 ತಿಂಗಳಿನ ನಂತರ 30ರಲ್ಲಿ 19 ಜನರಿಗೆ ತಲೆ ನೋವು ಪ್ರಾರಂಭವಾಗಿತ್ತು ಮತ್ತು 7 ಜನರಿಗೆ ತಲೆನೋವು ಕಡಿಮೆಯಾಗಿತ್ತು. ಇದರ ನಂತರ 20 ಜನರಿಗೆ ಮತ್ತೊಮ್ಮೆ ಚ್ಯೂಯಿಂಗ್ ಗಮ್‌ ತಿನ್ನಲು ಕೊಡಲಾಯಿತು ಇವರಿಗೆ ಕೂಡ ತಲೆನೋವು ಹೆಚ್ಚಾಗಿತ್ತು. ಇನ್ನು ಮುಂದೆ ನಿಮಗೆ ತಲೆ ನೋವು ಬಂದರೆ ಚ್ಯೂಯಿಂಗ್‌ ಗಮ್‌ ತಿನ್ನುವುದನ್ನು ಬಿಟ್ಟು ಬಿಡಿ.

ವೆಬ್ದುನಿಯಾವನ್ನು ಓದಿ