ವಿಶ್ವ ಕ್ಷಯರೋಗ ದಿನ : ಪ್ರತಿವರ್ಷ 10 ಲಕ್ಷ ಮಕ್ಕಳಿಗೆ ಟಿಬಿ ಆಗುತ್ತದೆ

ಸೋಮವಾರ, 24 ಮಾರ್ಚ್ 2014 (15:49 IST)
PR
ಇಂದು ವಿಶ್ವ ಟಿಬಿ ದಿನವಾಗಿದೆ, ಇಡೀ ವಿಶ್ವ ಇಂದು ಈ ದಿನವನ್ನು ಆಚರಿಸುತ್ತಿದೆ ಮತ್ತು ಟಿಬಿಯಿಂದ ದೂರವಿರುವುದು ಹೇಗೆ ಮತ್ತು ಟಿಬಿ ಆದರೆ ಯಾವ ಚಿಕಿತ್ಸೆ ಪಡೆಯಬೇಕು ಎಂದು ವಿಶ್ವಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿವೆ. 2011ರಿಂದ ಇಲ್ಲಿಯವರೇಗೆ ಮಕ್ಕಳಲ್ಲಿ ಕ್ಷಯರೋಗ ಎರಡು ಪಟ್ಟು ಹೆಚ್ಚಳ ಕಂಡಿದೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಬೊಸ್ಟನ್‌‌ನಲ್ಲಿ ಬ್ರೀಧಮ್ ಆಂಡ್‌ ವುಮೆನ್ಸ್‌‌‌ ಹಾಸ್ಪಿಟಲ್‌‌‌ (ಬಿಡಬ್ಲ್ಯೂಎಚ್‌‌‌‌‌) ಮತ್ತು ಹಾರ್ವ್‌‌ರ್ಡ ಮೆಡಿಕಲ್‌ ಸ್ಕೂಲ್‌ ( ಹೆಚ್‌‌‌‌‌‌ಎಮ್‌‌ಎಸ್‌‌‌) ಸಂಶೋಧಕರಿಂದ ತಿಳಿದು ಬಂದ ವಿಷಯವೇನೇಂದರೆ, ಪ್ರತಿ ವರ್ಷ 10 ಲಕ್ಷ ಮಕ್ಕಳಿಗೆ ಕ್ಷಯರೋಗ ಬರುತ್ತದೆ ಎಂದು ತಿಳಿದು ಬಂದಿದೆ.

32,000 ಮಕ್ಕಳಲ್ಲಿ ಮಲ್ಟಿಡ್ರಗ್‌ ರೆಸಿಸ್ಟೆಂಟ್‌ ಟಿಬಿ (ಎಮ್‌‌‌‌ಡಿಆರ್‌‌-ಟಿಬಿ) ಕಾಣಿಸಿಕೊಂಡಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಈ ವರದಿ ' ದಿ ಲೆಂಸೆಟ್‌‌‌‌' ಜರ್ನಲ್‌‌ನಲ್ಲಿ ವರದಿಯಾಗಿದೆ.

" ಡಬ್ಲ್ಯೂಹೆಚ್‌‌‌ಓ ವರದಿಯ ಪ್ರಕಾರ ಮಕ್ಕಳಲ್ಲಿ ಟಿಬಿ ರೋಗ 2011ರಿಂದ ಇಲ್ಲಿಯವರೆಗೆ ಎರಡು ಪಟ್ಟು ಹೆಚ್ಚಳವಾಗಿದೆ" ಎಂದು ಹಾರ್ವರ್ಡ್‌ ಸ್ಕೂಲ್‌ ಆಪ್‌‌ ಪಬ್ಲಿಕ್‌ ನ ಪ್ರೊಫೆಸರ್‌‌ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ