ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಬಿಜೆಪಿ ನಾಯಕರ ದೌಡು
ಬಹುಮತ ಸಾಬೀತಾಗಿ ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಿದ ಮೇಲೆ ಬಿಜೆಪಿ ತಳಮಳಗೊಂಡಿದೆ. ಏಕಾ ಏಕಿಯಾಗಿ ಕಮಲ ಪಾಳೆಯದ ಶಾಸಕರು ಅತೃಪ್ತ ಶಾಸಕ ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಬಿಜೆಪಿಯ ಶಾಸಕರಾರ ಎಸ್.ಆರ್.ವಿಶ್ವನಾಥ ಹಾಗೂ ಎಂ.ಕೃಷ್ಣಪ್ಪ ಅವರು ರಾಮಲಿಂಗಾ ರೆಡ್ಡಿಯವರನ್ನ ಭೇಟಿ ಮಾಡಿ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆ.
ಚರ್ಚೆ ಬಳಿಕ ವಿಶ್ವನಾಥ್ ಮಾತನಾಡಿದ್ದು, ಸಮಾಜದ ಚುನಾವಣೆ ವಿಷಯ ಸಂಬಂಧ ಚರ್ಚೆ ನಡೆಸಲಾಗಿದೆ ಎಂದರು.
ಮುಖ್ಯಮಂತ್ರಿ ಸದನದಲ್ಲಿ ಬಹುಮತ ಸಾಬೀತು ಪಡಿಸೋದಿಲ್ಲ. ಅದಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ ಸಿಎಂ ಬಳಿ ಇಲ್ಲ.
ಬಹುಮತ ಸಾಬೀತು ವೇಳೆ ಮೈತ್ರಿ ಪಕ್ಷಗಳ ಶಾಸಕರೆ ಗೈರಾಗುತ್ತಾರೆ ಅನ್ನೋ ಮೂಲಕ ಮೈತ್ರಿ ಸರಕಾರ ಉರುಳಲಿದೆ ಎಂದ್ರು.