ಬಿಸಿಲ ಆಘಾತ- ದೇಹ ಸಂರಕ್ಷಣೆ

ಸೋಮವಾರ, 21 ಏಪ್ರಿಲ್ 2014 (12:08 IST)
ಬೇಸಿಗೆ ಬಂದೇ ಬಿಟ್ಟಿದೆ. ಸೂಕ್ಷ್ಮದೇಹ ಪ್ರವೃತ್ತಿಯವರು ಬಿಸಿಲಬೇಗೆಯನ್ನು ತಡಕೊಳ್ಳುವುದು ಕೊಂಚ 
 
ಕಷ್ಟ. ಬಿಸಿಲೂ ಕೆಲವೊಮ್ಮೆ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ.
 
ಮನುಷ್ಯನ ದೇಹದಲ್ಲಿ ಅಗತ್ಯಕ್ಕಿಂತ ನೀರಿನಂಶ ಕಡಿಮೆಯಾದಾಗ ದೇಹವು ಬಳಲಿ 
 
ನಿರ್ಜಲ(ಡಿಹೈಡ್ರೇಶನ್)ವಾಗುವುದು. ಅದರಲ್ಲೂ ಬೇಸಿಗೆಯಲ್ಲಿ ದೇಹದಿಂದ ಹೆಚ್ಚಿನ ಪ್ರಮಾಣದ ನೀರು 
 
ಬೆವರಿನ ಮೂಲಕ ಹರಿದು ಹೋಗುತ್ತದೆ. 
 
ಹಾಗಾಗಿ ಸಾಧ್ಯವಾದಷ್ಟು ನೀರು ಅಥವಾ ದ್ರವ ಪದಾರ್ಥವನ್ನು ಸೇವಿಸಬೇಕು. ಇಲ್ಲದಿದ್ದಲ್ಲಿ ದೇಹ 
 
ನಿರ್ಜಲವಾಗಿ ಬಿಸಿಲ ಆಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬಿಸಿಲಿನಲ್ಲಿ ಹೊರಹೋಗುವಾಗ 
 
ತಲೆಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆಯನ್ನು ಹಿಡಿದು ಹೋಗುವುದು ಅಥವಾ ಟೋಪಿಯನ್ನು 
 
ಧರಿಸುವುದು ಸೂಕ್ತ.

ವೆಬ್ದುನಿಯಾವನ್ನು ಓದಿ