ಬೆಣ್ಣೆ ಸೇವಿಸುವುದರಿಂದ ದೃಷ್ಟಿ ದೋಷ ಹೆಚ್ಚಳವಾಗುತ್ತಾ? ಇಲ್ಲಿದೆ ಅಸಲಿ ಸತ್ಯ!
ಶನಿವಾರ, 4 ಸೆಪ್ಟಂಬರ್ 2021 (09:09 IST)
ಬೆಣ್ಣೆ (Butter)ಸೇವಿಸುವುದರಿಂದ ರಕ್ತದ ಸಂಚಾರ ಸುಗಮವಾಗುತ್ತದೆ. ಚರ್ಮದ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ. ಇನ್ನು ಬೆಣ್ಣೆಯನ್ನು ತಿನ್ನುವುದರಿಂದ ದೃಷ್ಟಿ ದೋಷವು ಹೆಚ್ಚಳವಾಗುತ್ತದೆ ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿತ್ತು.ಇದರ ಜಾಡನ್ನು ಹಿಡಿದ ಜಾಗರಣ್ ನ್ಯೂ ಮೀಡಿಯಾದ ಫ್ಯಾಕ್ಟಿಂಗ್ ಚೆಕ್ಕಿಂಗ್ ವೆಬ್ಸೈಟ್ ವಿಶ್ವಾಸ್ ನ್ಯೂಸ್ ಇದರ ಮಾಹಿತಿ ಸುಳ್ಳು ಎಂದು ಹೇಳಿದೆ.
ಈ ಕುರಿತು ಸಂಶೋಧನೆ ನಡೆಸಿದ ವಿಶ್ವಾಸ್ ನ್ಯೂಸ್, ಈ ಲೇಖನ ಜನರನ್ನು ದಾರಿ ತಪ್ಪಿಸುತ್ತಿದೆ. ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಆರೋಗ್ಯ ಪ್ರಯೋಜನಗಳಿವೆ. ಆದರೆ ಇದನ್ನು ವೈದ್ಯರ ಸಲಹೆ ಸೂಚನೆ ಮೇರೆಗೆ ತೆಗೆದುಕೊಂಡರೆ ಉತ್ತಮ ಎಂದು ಹೇಳುತ್ತಾರೆ.
ವಿಶ್ವಾಸ್ ನ್ಯೂಸ್ ಬೆಣ್ಣೆಯನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಹುಡುಕಾಡಲು ಪ್ರಾರಂಭಿಸಿತು. ಆಗ ಬೆಣ್ಣೆಯು ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂನ ಮೂಲವಾಗಿದೆ ಎಂದು ತಿಳಿದುಬಂದಿದೆ. ಅಮೆರಿಕದ ಆಪ್ಟೋಮೆಟ್ರಿಕ್ ಅಸೋಸಿಯೇಷನ್ (ಎಒಎ) ಪ್ರಕಾರ ವಿಟಮಿನ್ ಎ ಪದಾರ್ಥಗಳು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮತ್ತೊಂದು ಸಂಶೋಧನೆ ಪ್ರಕಾರ, ವಿಟಮಿನ್ ಎ ಮತ್ತು ವಿಟಮಿನ್ ಇ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (ಎಎಮ್ಡಿ) ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಆದರೆ, ಎಲ್ಲಾ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಆದರೆ, ಕೆಲವು ಆಹಾರಗಳ ಸೇವನೆ ಮತ್ತು ಬೆಣ್ಣೆಯ ಸೇವನೆಯಿಂದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗುತ್ತದೆ ಎಂಬುದಕ್ಕೆ ಸಿಕ್ಕಿರುವ ಪುರಾವೆಗಳು ತುಂಬಾ ವಿರಳ ಎಂದೇ ಹೇಳಬಹುದು.
ವಿಶ್ವಾಸ್ ನ್ಯೂಸ್ ಅಪೋಲೊ ಸ್ಪೆಕ್ಟ್ರಾ ಗ್ರೂಪ್ನ ಹಿರಿಯ ಕಣ್ಣಿನ ಶಸ್ತ್ರಚಿಕಿತ್ಸಕ ಡಾ.ಕಾರ್ತಿಕೇ ಸಂಘಲ್ ಅವರೊಂದಿಗೆ ಮಾತನಾಡಿ, ವೈರಲ್ ಆದ ಪೋಸ್ಟ್ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಆಗ ಅವರು, ಬೆಣ್ಣೆಯಲ್ಲಿ ಬೀಟಾ ಕ್ಯಾರೋಟಿನ್ ಇದ್ದು, ಇದು ವಿಟಮಿನ್ ಎ ಪೂರ್ವಗಾಮಿಯಾಗಿದೆ. ಬೀಟಾ ಕ್ಯಾರೋಟಿನ್ನ ಮುಖ್ಯ ಪ್ರಯೋಜನವೆಂದರೆ ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಕಾರ್ನಿಯಾ ಮತ್ತು ರೆಟಿನಾದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಬೆಣ್ಣೆಯಲ್ಲಿ ವಿಟಮಿನ್ ಇ ಕೂಡ ಇದ್ದು, ಇದು ಯುವಿ ಕಿರಣಗಳಿಂದ ರಕ್ಷಿಸುತ್ತದೆ. ವಿಟಮಿನ್ ಬಿ 12 ಆಪ್ಟಿಕ್ ನರಕ್ಕೆ ಒಳ್ಳೆಯದು. ಏಕೆಂದರೆ ಇದು ನರವನ್ನು ರಕ್ಷಿಸುತ್ತದೆ ವಿಟಮಿನ್ ಡಿ ಕೂಡ ಸಹಾಯ ಮಾಡುತ್ತದೆ. ಆದರೆ ಕೇವಲ ಬೆಣ್ಣೆಯಿಂದಲೇ ಕಣ್ಣಿನ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಈ ರೀತಿಯಾದ ಚಿಕಿತ್ಸೆಯನ್ನೂ ನೀಡಲಾಗುವುದಿಲ್ಲ. ಅದಕ್ಕೆ ಸರಿಯಾದ ಚಿಕಿತ್ಸೆಯ ಅಗತ್ಯವಿದೆ. ಬೆಣ್ಣೆಯ ಮಿತವಾದ ಸೇವನೆ ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡಬಹುದು. ಆದರೆ ವೈದ್ಯಕೀಯ ಸಲಹೆಯನ್ನು ಯಾವಾಗಲೂ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಆಹಾರ ಮಾತ್ರವಲ್ಲ ಯಾವುದೇ ಆರೋಗ್ಯ ಸಂಬಂಧಿತ ವಿಡಿಯೋ, ಪೋಸ್ಟ್ಗಳನ್ನು ನೋಡಿದಾಗ ಮೊದಲು ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.