ಮದುವೆಯಾದ ಮೇಲೆ ಹಳೇ ಲವರ್ ಜತೆ ಪರಾರಿ; ಮುಂದೇನಾಯ್ತು?

ಗುರುವಾರ, 27 ಜೂನ್ 2019 (18:28 IST)
ಪ್ರಶ್ನೆ: ಸರ್, ನಾನು 25 ವರ್ಷದ ಗೃಹಿಣಿ. ಒಂದು ಮಗುವಿದೆ. ನಾನು ನರ್ಸಿಂಗ್ ಓದುತ್ತಿರೋವಾಗ ಒಬ್ಬನನ್ನು ಪ್ರೀತಿಸಿದ್ದೆ. ಆದರೆ ಮನೆಯಲ್ಲಿ ಬೇರೋಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಹೀಗಾಗಿ ಮದುವೆಯಾದ ಬಳಿಕ ನಾನು ನನ್ನ ಗಂಡನೊಂದಿಗೆ ಹೊಂದಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಬಳಿಕ ಪ್ರೀತಿಸಿದ ಹಳೆ ಲವರ್ ಜತೆ ಮನೆಬಿಟ್ಟು ಹೋಗಿದ್ದೆ.


ಆದರೆ ಆ ಲವರ್ ನನ್ನನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಕೈ ಬಿಟ್ಟನು. ಇದರಿಂದಾಗಿ ಹಳೇ ಗಂಡನ ಪಾದವೇ ಗತಿ ಅಂತ ಗಂಡನ ಮನೆಗೆ ಬಂದಿದ್ದೇನೆ. ಆದರೆ ಗಂಡನಿಗೆ ವಿಪರೀತ ಸಾಲ ಇದೆ. ಮೇಲಾಗಿ ಮಗುವಿನ ಮುಖ ನೋಡಿ ಸುಮ್ಮನಾಗಿದ್ದಾನೆ. ಆದರೆ ತನ್ನ ಸಾಲ ತೀರಿಸೋಕೆ ನನಗೆ ವೈಶ್ಯವಾಟಿಕೆ ಮಾಡುವ ಮನೆಯಲ್ಲಿ ಬಿಡುತ್ತಿದ್ದಾನೆ. ಅನಿವಾರ್ಯವಾಗಿ ನಾನು ಬೇರೆ ಗಂಡಸರ ಜತೆಗೆ ಮಲಗುತ್ತಿದ್ದೇನೆ. ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ: ಮದುವೆಗೂ ಮುನ್ನವೇ ನೀವು ಬೇರೊಬ್ಬನನ್ನು ಪ್ರೀತಿ ಮಾಡಿದ್ದರೆ ಮನೆಯಲ್ಲಿ ಹೇಳಿ ಅವನೊಂದಿಗೆ ಮದುವೆಯಾಗಬಹುದಿತ್ತು. ನಿಮ್ಮನ್ನು ನಿಮ್ಮ ಹಳೆ ಲವರ್ ಉಪಯೋಗಿಸಿಕೊಂಡು ಬಿಟ್ಟಿದ್ದು ನಿಮ್ಮ ಮನಸ್ಸಿಗೆ ಮತ್ತಷ್ಟು ದುಃಖ ನೀಡಿದೆ ಎಂದಿದ್ದೀರಿ. ನೀವು ಗಂಡನಿಗೂ ಸರಿಯಾಗಿ ಬೆಲೆ ಕೊಟ್ಟಿಲ್ಲ. ನಿಮ್ಮ ದ್ವಂದ್ವ ನಿಲುವು ಹಾಗೂ ನೀವು ಮನೆ ಬಿಟ್ಟು ಹೋಗಿದ್ದು ಎರಡೂ ತಪ್ಪು.

ನಿಮ್ಮ ಗಂಡ ತಾನು ಮಾಡಿರುವ ಸಾಲ ತೀರಿಸುವುದಕ್ಕಾಗಿ ನಿಮ್ಮನ್ನು ವೈಶ್ಯಾವಾಟಿಕೆಗೆ ದೂಡಿರುವುದು ಅಕ್ಷಮ್ಯ. ನೀವು ಆತನೊಂದಿಗೆ ಸರಿಯಾಗಿ ಇದ್ದಿದ್ದರೆ ಇಂದು ನಿಮಗೆ ಈ ಗತಿ ಬರುತ್ತಿರಲಿಲ್ಲ. ವೈಶ್ಯಾವಾಟಿಕೆಯಿಂದ ಹೊರಬಂದು, ಗಂಡನೊಂದಿಗೆ ಕುಳಿತು ಚರ್ಚಿಸಿ, ಆತನ ಸಾಲವೂ ತೀರಬೇಕು ಹಾಗೆ ನಿಮ್ಮ ಸಂಸಾರವೂ ಸುಖವಾಗಿರಬೇಕು. ಇದಕ್ಕೆ ಏನು ಪರಿಹಾರ ಎನ್ನುವುದನ್ನು ನೀವಿಬ್ಬರೂ ಕುಳಿತು ಚರ್ಚಿಸಿ. ತೀರ್ಮಾನ ಕೈಗೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ