ಮಕ್ಕಳನ್ನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುವುದು ಹೇಗೆ?

ಮಂಗಳವಾರ, 3 ಫೆಬ್ರವರಿ 2015 (16:15 IST)
ಮಕ್ಕಳನ್ನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುವುದು ಹೇಗೆ? ಕೆಲವು ಪ್ರಖ್ಯಾತ ವೈದ್ಯರು ಕೆಳಗಿನ ಸಲಹೆಗಳನ್ನು ನೀಡಿದ್ದಾರೆ.
 
 ಆಹಾರ: ಮಕ್ಕಳು ಹೆಚ್ಚಾಗಿ ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಿ. ಇವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಇವು ರಾಸಾಯನಿಕಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ.
 
ದೈಹಿಕ ಚಟುವಟಿಕೆ: ಸಾಕಷ್ಟು ವ್ಯಾಯಾಮ ಮಾಡುವ ಬಗ್ಗೆ ಮಕ್ಕಳಿಗೆ ಕಲಿಸಬೇಕು. ಸೋಮಾರಿ ಜೀವನಶೈಲಿಯು ಕ್ಯಾನ್ಸರ್ ಕಾರಣಗಳಲ್ಲಿ ಒಂದಾಗಿದ್ದು, ದೇಹದ ಚಟುವಟಿಕೆ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ಹೊರಾಂಗಣ ಕ್ರೀಡೆಗಳು, ಈಜುವಿಕೆ ಮುಂತಾದವುಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ.
 
ಬಾಲ್ಯದ ಬೊಜ್ಜು: ಮಕ್ಕಳನ್ನು 2 ಗಂಟೆಗಳಿಗಿಂತ ಹೆಚ್ಚು ಕಾಲ ಟಿವಿ ವೀಕ್ಷಣೆ ಮಾಡದಂತೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಮತ್ತು ಸಮರ್ಪಕ ಆಹಾರ ನೀಡಬೇಕು. ಜಂಕ್ ಆಹಾರ, ದಿಢೀರ್ ಆಹಾರ ಮತ್ತು ಸಿಹಿಗಳನ್ನು ಹೆಚ್ಚು ತಿನ್ನದಂತೆ ನಿರ್ಬಂಧಿಸಬೇಕು.
 
ಯುವಿ ಕಿರಣಗಳಿಂದ ರಕ್ಷಣೆ: ಮಕ್ಕಳು ಸೂರ್ಯನ ಯುವಿ ಕಿರಣಗಳಿಗೆ ನೇರವಾಗಿ ಮೈಒಡ್ಡದಂತೆ ಎಚ್ಚರವಹಿಸಬೇಕು.ಧೂಮಪಾನ ಮತ್ತು ಆಲ್ಕೋಹಾಲ್: ಬಾಲ್ಯದಿಂದ ಮಕ್ಕಳಿಗೆ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯ ಹಾನಿಕರ ಪರಿಣಾಮಗಳ ಬಗ್ಗೆ ಕಲಿಸಬೇಕು.
ನಿಮ್ಮ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು: ಮೊಸರು, ಬೆಳ್ಳುಳ್ಳಿ, ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ತಿನ್ನುವಂತೆ ಪ್ರೇರೇಪಿಸುವ ಮೂಲಕ ಮತ್ತು ವ್ಯಾಯಾಮದ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು.

ವೆಬ್ದುನಿಯಾವನ್ನು ಓದಿ