ಹೆಂಡತಿ ಕಾಟ ತಾಳದೇ ಗಂಡ ಓಡಿಹೋದ : ಆಕೆ ಯಾರ ತೆಕ್ಕೆಯಲ್ಲಿದ್ದಾಳೆ?
ಶುಕ್ರವಾರ, 16 ಆಗಸ್ಟ್ 2019 (16:22 IST)
ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 35. ನೋಡೋಕೆ ತುಂಬಾ ಚೆಂದವಾಗಿದ್ದಾಳೆ.
ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಆಕೆಯ ಕಾಟ ತಾಳದೇ ಓಡಿಹೋಗಿದ್ದಾನೆ. ಗಂಡ ಹೋದ ಏಳೆಂಟು ತಿಂಗಳು ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳ ಕಚೇರಿ ಕೆಲಸ, ಬ್ಯಾಂಕ್, ಮಾರ್ಕೆಟ್ ಹೀಗೆ ಮೊದಲಾದ ಕೆಲಸಗಳಿಗೆ ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದಳು. ಹೊರಗಡೆ ಹೋಗುವಾಗ ಕೈಗೆ ಕೈ ತಗಲುವುದು, ಮೈಗೆ ಮೈಗೆ ತಗಲುವುದು ನಡೆಯಿತು.
ಅದಾದ ಬಳಿಕ ನಾನು ನನಗೆ ಅರಿವಿಲ್ಲದಂತೆ ಆಕೆಯ ಕಡೆಗೆ ಆಕರ್ಷಿತನಾದೆ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಬರಸೆಳೆದು ತಬ್ಬಿಕೊಂಡೆ. ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ ಆ ಬಳಿಕ ಆಕೆಯೂ ಸಹಕರಿಸಿದಳು. ಹೀಗಾಗಿ ನಮ್ಮ ನಡುವೆ ಹಲವು ಬಾರಿ ಸಮಾಗಮ ನಡೆದಿದೆ. ಈಗ ನಮ್ಮ ಮನೆಯಲ್ಲಿ ಮದುವೆಗೆ ಹುಡುಗಿ ಹುಡುಕ್ತಿದ್ದಾರೆ. ಆದರೆ ನನಗೆ ಮೈ ಕೈ ತುಂಬಿಕೊಂಡು ಬೊಂಬಾಟ್ ಆಗಿರೋ ಇವಳನ್ನು ಬಿಡಲು ಮನಸ್ಸಿಲ್ಲ.
ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡ ಓಡಿಹೋದ ಬಳಿಕ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.
ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ನಿಮ್ಮ ಅಕ್ಕ, ತಂಗಿಯ ಬಾಳು ಇದೇ ರೀತಿ ಆಗಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ವಿಚಾರ ಮಾಡಿ. ಆ ಹೆಣ್ಣಿಗೆ ಬೆಲೆ ಕೊಡಿ, ಬಾಳು ಕೊಡಿ.