ನಿಮಿರು ದೌರ್ಬಲ್ಯಕ್ಕಾಗಿ ಇವುಗಳಿಂದ ದೂರವಿರಿ

ಭಾನುವಾರ, 14 ಜುಲೈ 2019 (14:27 IST)
ಉತ್ತಮ ರೀತಿಯಲ್ಲಿ ಸಂಭೋಗವನ್ನು ಯಾವನು ನಡೆಸುತ್ತಾನೋ , ಸಂತೋಷವನ್ನು ಅನುಭವಿಸುತ್ತಾನೋ ಅಂತಹವನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಲಾಗುವುದು. ಕೆಲವು ಪುರುಷರಿಗೆ ನಿಮಿರು ಸಮಸ್ಯೆ ಇರುವುದರಿಂದ ಸಂಭೋಗ  ಸುಖವನ್ನು ಅನುಭವಿಸಲು ಆಗುವುದಿಲ್ಲ. ಆದ್ದರಿಂದ ಪುರುಷರಿಗೆ ನಿಮಿರುವ ಸಮಸ್ಯೆ ಬರಬಾರದೆಂದರೆ  ಈ ಕೆಟ್ಟ ಆಹಾರ ಪದಾರ್ಥಗಳಿಂದ ದೂರ ಇರಬೇಕು.

*ಸೋಯಾ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥ ಆಗಿದ್ದರೂ ಇದನ್ನು ಅತಿಯಾಗಿ ಸೇವಿಸಿದರೆ ಪುರುಷರಿಗೆ ನಿಮಿರು ಸಮಸ್ಯೆ ಉಂಟಾಗುತ್ತದೆ.


*ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ ಸೇವಿಸುವುದರಿಂದ ಈಸ್ಟ್ರೋಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು. ಜೊತೆಗೆ ಅನಿಯಮಿತವಾಗಿ ದೇಹದ ತೂಕವು ಹೆಚ್ಚುವುದು. ಅಂತವರು  ಲೈಂಗಿಕ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.


* ಆಲ್ಕೋಹಾಲ್ ಕುಡಿಯುವುದರಿಂದ ಇದು ಹಾರ್ಮೋನ್ಗಳ ಮೇಲೆ ಪ್ರಭಾವ ಬೀರುವುದರ ಮೂಲಕ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು.


*ಪ್ಲಾಸ್ಟಿಕ್ ಬಾಟಲಿನಲ್ಲಿರುವ ನೀರನ್ನು ಕುಡಿಯುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಮಟ್ಟ ಕುಗ್ಗುವುದು. ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಶಿಶ್ನಗಳು ನಿಮಿರುವಿಕೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ ಅದರ ಜೊತೆಗೆ ಬಾಟಲ್, ಕ್ಯಾನ್ ಅಥವಾ ಕಾಗದದ ಡಬ್ಬಗಳಲ್ಲಿ ಸಂಗ್ರಹಿಸಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.


* ಕೃತಕವಾಗಿ ಬೆಳೆಸಿದ ಮೀನುಗಳನ್ನು ತಿನ್ನುವುದರಿಂದ ಇದು ಪುರುಷರಲ್ಲಿ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುವುದು.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ