ತ್ವಚೆಯ ಅಂದ ಹೆಚ್ಚಿಸಲು ಬೆಳಗ್ಗೆ ಈ ಪಾನೀಯಗಳನ್ನು ಸೇವಿಸಿ

ಗುರುವಾರ, 26 ಆಗಸ್ಟ್ 2021 (07:06 IST)
Healthy Drinks: ಚರ್ಮದ ಅಂದ ಹೆಚ್ಚಿಸುವಲ್ಲಿ ಕೆಲ ಪಾನೀಯಗಳು ಪ್ರಮುಖ ಪಾತ್ರವಹಿಸುತ್ತದೆ. ನಾವು ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ, ನಮ್ಮ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಬಹುದು.

ಬೆಳಗ್ಗೆ ನಾವು ಕುಡಿಯುವ ನೀರು ಮತ್ತು ಪಾನೀಯಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸತ್ಯ. ಕೆಲ ಪಾನೀಯಗಳು  ದೇಹದ ಚಯಾಪಚಯ ಹೆಚ್ಚಿಸಿ  ಮತ್ತು ಹೊಟ್ಟೆಯನ್ನು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಂದು ಅಥವಾ ಎರಡು ಲೀಟರ್ ನೀರನ್ನು ಕುಡಿಯುವುದರೊಂದಿಗೆ ದಿನವನ್ನು ಪ್ರಾರಂಭಿಸುವುದು ಒಳ್ಳೆಯ ಅಭ್ಯಾಸ. ನಾವು ಹೆಚ್ಚಾಗಿ ದೇಹದ ತೂಕ ಇಳಿಸುವ ನಿಟ್ಟಿನಲ್ಲಿ ಕೆಲವೊಂದು ಪಾನೀಯಗಳನ್ನು ಸೇವಿಸುತ್ತೇವೆ. ಆದರೆ ನಿಮಗೆ ಗೊತ್ತಾ ಅದೇ ಪಾನೀಯಗಳು ನಮ್ಮ ಚರ್ಮದ ಅಂದವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾದ್ರೆ ಯಾವ ಪಾನೀಯಗಳು ಯಾವ ರೀತಿ ಚರ್ಮದ ಮೇಲೆ ಪರಿಣಾಮ ಬೀರಿ, ತ್ವಚೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.
ನೀರು
ಉತ್ತಮ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಅದ್ಭುತ ಫಲಿತಾಂಶ ಸಿಗುತ್ತದೆ. ನಮ್ಮ ದೇಹವು ಶೇಕಡಾ 75 ರಷ್ಟು ನೀರನ್ನು ದ್ರವ ರೂಪದಲ್ಲಿ ಹೊಂದಿರುತ್ತದೆ. ಇನ್ನು ನೀರು ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ಹೊಳೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮತ್ತೊಂದೆಡೆ ನೀರು ಕಡಿಮೆಯಾದರೆ ಚರ್ಮವು ಒಣಗಿದಂತಾಗಿ ಹಾಳಾಗುತ್ತದೆ. ಪ್ರತಿನಿತ್ಯ ಸರಾಸರಿ 4.5 ರಿಂದ 5.5 ಲೀಟರ್ ನೀರನ್ನು ಸೇವಿಸುವುದರಿಂದ ನಿಮ್ಮ ದೇಹವು ಖನಿಜಗಳು ಮತ್ತು ಆಮ್ಲಜನಕ ವಾಹಕಗಳನ್ನು ಅಭಿವೃದ್ಧಿ ಮಾಡುತ್ತದೆ, ಅದರಿಂದ  ಅದು ದೇಹದಲ್ಲಿರುವ ಎಲ್ಲಾ ವಿಷವನ್ನು ಬಿಡುಗಡೆ ಮಾಡುತ್ತದೆ ಮತ್ತು ಚರ್ಮದ ಮಾಯಿಶ್ಚರೈಸರ್ಗಳಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮುಖ್ಯವಾಗಿ, ಮೊಡವೆಗಳು ಬರದಂತೆ ತಡೆಯುತ್ತದೆ.
ಜೇನುತುಪ್ಪ ಮತ್ತು ನಿಂಬೆ ರಸ

ನೀರಿಗೆ ಎರಡರಿಂದ  ಮೂರು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಸೇವಿಸಿ. ಇದು ಎಲೆಕ್ಟ್ರೋಲೈಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆ್ಯಂಟಿಆಕ್ಸಿಡೆಂಟ್ಗಳನ್ನು ಉತ್ಪಾದನೆ ಮಾಡುತ್ತದೆ. ಇದು ನಿಮ್ಮ ದೇಹದಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು  ಇದು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ಜೇನುತುಪ್ಪವು  ಹಲವು ಚರ್ಮಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಹೊಂದಿದ್ದು ನಿಮ್ಮ ಚರ್ಮವನ್ನು ತೇವಾಂಶದಿಂದ ಇರಿಸುತ್ತದೆ, ನಿಂಬೆಯಲ್ಲಿ ವಿಟಮಿನ್ ಸಿ ಇದ್ದು ಚರ್ಮಕ್ಕೆ ಹೊಳಪು ನೀಡುತ್ತದೆ.
ಜ್ಯೂಸ್

ಹಣ್ಣುಗಳಲ್ಲಿ ಮತ್ತು ತರಕಾರಿಯಲ್ಲಿ  ಪೋಷಕಾಂಶಗಳು ಸಮೃದ್ಧವಾಗಿವೆ. ಕ್ಯಾರೆಟ್, ಬೀಟ್ರೂಟ್, ದಾಳಿಂಬೆ ಮತ್ತು ಸಿಹಿ ಆಲೂಗಡ್ಡೆಯಂತಹ ತರಕಾರಿಗಳಲ್ಲಿ ಸಮೃದ್ಧವಾದ ಖನಿಜಗಳು ಮತ್ತು ವಿಟಮಿನ್ ಗಳಿದ್ದು ಅವು  ಮೊಡವೆಗಳು ಬರದಂತೆ ತಡೆಯಲು ಮತ್ತು ಆರೋಗ್ಯಕರ ಚರ್ಮವನ್ನು  ಪಡೆಯಲು ಸಹಾಯ ಮಾಡುತ್ತದೆ. ಕ್ಯಾರೆಟ್ ಮತ್ತು ಬೀಟ್ರೂಟ್ ವಿಟಮಿನ್ ಎ ಅನ್ನು ಹೊಂದಿದ್ದು ಅದು ಮೊಡವೆಗಳ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ. ಬೀಟ್ರೂಟ್ ರಸವು ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುವ ಮೂಲಕ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಟೊಮೆಟೊ ಮತ್ತು ಸೌತೆಕಾಯಿ ಹಾಗೂ ಸಲಾಡ್ಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಪಡೆಯಬಹುದು.
ಗ್ರೀನ್ ಟೀ

ನೀವು ಚಹಾ ಪ್ರಿಯರಾಗಿದ್ದರೆ, ಗ್ರೀನ್ ಟೀ ಅಥವಾ ಲೆಮೆನ್ ಟೀಯನ್ನು ನಿಯಮಿತವಾಗಿ ಸೇವಿಸಿ. ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ ಮತ್ತು ವಿಟಮಿನ್ ಸಿ ಜೊತೆಗೆ ಇತರ ಪೋಷಕಾಂಶಗಳನ್ನು ಹೊಂದಿದ್ದು ಚರ್ಮವನ್ನು ನೈಸರ್ಗಿಕವಾಗಿ ಆರೋಗ್ಯಕರವಾಗಿರಿಸುತ್ತದೆ ಹಾಗೂ ಚರ್ಮಕ್ಕೆ ಹೊಳಪು ನೀಡುತ್ತದೆ.
ಅರಿಶಿನ ಹಾಲು ಅರಿಶಿನವು ಸಾಂಪ್ರದಾಯಿಕ ಮತ್ತು ಆಯುರ್ವೇದ ಔಷಧವಾಗಿದ್ದು, ಇದು ಆಂಟಿವೈರಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳಿದ್ದು, ಚರ್ಮ ಸುಕ್ಕಾಗುವುದನ್ನ ತಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಚಮಚ ಅರಿಶಿನವನ್ನು ಹಾಲು ಅಥವಾ ಬಿಸಿ ನೀರಿಗೆ ಸೇರಿಸಿ ಸೇವಿಸುವುದು ಚರ್ಮದ ಆರೋಗ್ಯಕ್ಕೆ ಉತ್ತಮ ಆಯ್ಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ