ಗಂಡ ಪೂನಾಕ್ಕೆ ಹೋಗಿದ್ದಾನೆ ನೀನು ಬಾ ಅಂತಿದ್ದಾಳೆ

ಬುಧವಾರ, 24 ಏಪ್ರಿಲ್ 2019 (19:40 IST)
ಪ್ರಶ್ನೆ: ನಮ್ಮ ಮನೆ ಎದುರಿನ ಮನೆಯಲ್ಲಿರುವ ಆಕೆ ನೋಡೋಕೆ ತುಂಬಾ ಸೂಪರ್ ಆಗಿದ್ದಾರೆ. ವಯಸ್ಸು 35 ಇರಬಹುದು. ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ದುಡಿಯೋಕೆ ಅಂತ (ಗುಳೆ) ಪೂನಾ ಗೆ ಹೋಗಿ ಮೂರು ತಿಂಗಳಾಯಿತು. ಇನ್ನೂ ಬಂದಿಲ್ಲ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮವಾಂಛೆ ತೀರಿಸಿಕೊಳ್ಳುತ್ತಿದ್ದಾಳೆ.

ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಆದರೆ ನಮ್ಮಿಬ್ಬರ ಸರಸದ ಬಗ್ಗೆ ನನ್ನ ಪತ್ನಿಗೆ ಅನುಮಾನ ಮೂಡಿದಂತಿದೆ. ಅವಳು ಸದಾ ಫೋನ್ ಚೆಕ್ ಮಾಡೋದು, ಫಾಲೋ ಮಾಡೋದು ಮಾಡ್ತಿದ್ದಾಳೆ. ಹೀಗಾಗಿ ನಾನು ಎದುರು ಮನೆಯವಳೊಂದಿಗೆ ಸುಖಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮದ್ಯದ ದಾಸನಾಗುತ್ತಿದ್ದೇನೆ. ಪರಿಹಾರ ಏನಾದರೂ ಇದ್ದರು ತಿಳಿಸಿ.

ಉತ್ತರ: ನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಪತ್ನಿಯನ್ನು ಹಾಗೂ ಎದುರು ಮನೆಯಾಕೆಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಎದುರು ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡ ಬಂದಾಗ ನಿಮ್ಮಿಬ್ಬರ ವಿಷಯ ಗೊತ್ತಾದರೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ದಾಂಪತ್ಯದಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ