ದಿ ಟ್ರಾನ್ಸ್‌ಎಸೋಫಜಿಲ್‌ ಕಾರ್ಡಿಯೊಗ್ರಾಮ್‌(ಟಿಇಇ)

ಶನಿವಾರ, 22 ನವೆಂಬರ್ 2014 (11:39 IST)
ಟಿಇಇ ಹೇಗೆ ಕಾರ್ಯಾಚರಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವುದಾದರೆ-
ಎಕೋಕಾರ್ಡಿಯೊಗ್ರಾಮ್‌ನಲ್ಲಿ ಟ್ರಾನ್ಸ್‌ಡ್ಯೂಸರ್‌ ಅನ್ನು ಹೃದಯದ ಗೋಡೆಯ ಮೇಲೆ ಇರಿಸಲಾಗುತ್ತದೆ. ಟಿಇಇನಲ್ಲಿ ಟ್ರಾನ್ಸ್‌ಡ್ಯೂಸರನ್ನು ಎಸೋಪಾಗಸ್‌ಗೆ ಹಾಯಿಸಲಾಗುತ್ತದೆ ಮತ್ತು ಅದನ್ನು ಹೃದಯದ ನೇರ ಹಿಂಭಾಗದಲ್ಲಿ ಇರಿಸಲಾಗುತ್ತದೆ. ರೋಗಿಗೆ ಸ್ಥಳೀಯ ಅರಿವಳಿಕೆ ನೀಡಿ ಬಾಯಿ ಮತ್ತು ಗಂಟಲಿನ ಮೂಲಕ  ಟ್ರಾನ್ಸ್‌ಡ್ಯೂಸರ್‌ ಹಾಯಿಸುವ ಮೂಲಕ ಈ ಚಿಕಿತ್ಸೆ ನೀಡಲಾಗುತ್ತದೆ.
 
ಟಿಇಇ ಯಿಂದ ಎರಡು ಪ್ರಮುಖ ಪ್ರಯೋಜನಗಳಿವೆ
ಮೊದಲನೆಯದಾಗಿ, ಪರಿಮಾಣಿತ ಎಕೋ ತಂತ್ರಗಳ ಮೂಲಕ ಸಾಕಷ್ಟು ಎಕೋ ಇಮೇಜ್‌ಗಳನ್ನು ಪಡೆಯಲಾಗದ ರೋಗಿಗಳಿಗೆ (ಇಂತಹ ಪ್ರಕರಣಗಳಲ್ಲಿ ರೋಗಿಗಳ ಹೃದಯದ ಗೋಡೆಗಳು ದಪ್ಪವಾಗಿರುತ್ತವೆ, ಅಥವಾ ಎಂಪಿಸೆಮ ಅಂದರೆ, ಶ್ವಾಸಕೋಶಗಳಲ್ಲಿನ ವಾಯುಕೋಶಗಳಲ್ಲಿ ಊತ ಇರಬಹುದು) ಟಿಇಇ ಪ್ರಯೋಜನಕಾರಿ. ಟಿಇಇನಲ್ಲಿ ಹೃದಯದ ಗೋಡೆಯ ಮೂಲಕ ಅಥವಾ ಶ್ವಾಸಕೋಶದ ಮೂಲಕ ಧ್ವನಿ ತರಂಗಗಳು ಹಾಯಬೇಕಿಲ್ಲದ ಕಾರಣ ಎಲ್ಲ ರೋಗಿಗಳಲ್ಲಿ ಉತ್ತಮ ಎಕೋ ಇಮೇಜ್‌ಗಳನ್ನುಪಡೆಯಲು ಸಾಧ್ಯ.
 
ಎರಡನೆಯದಾಗಿ, ತೆರೆದ ಹೃದಯದ ಶಸ್ತ್ರಕ್ರಿಯೆ ವೇಳೆಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಟಿಇಇ ನೆರವೇರಿಸಬಹುದಾಗಿದೆ. ಟಿಇಇಯು ವಿಶೇಷವಾಗಿ ಹೃದಯ ಕವಾಟ ಪುನರ್ನಿಮಾಣ ಶಸ್ತ್ರಕ್ರಿಯೆ ವೇಳೆಗೆ ಪ್ರಯೋಜನಕಾರಿ. ಎಕೋ ಇಮೇಜ್ ತಕ್ಷಣದ ಪ್ರತಿಕ್ರಿಯೆ ನೀಡುವಕಾರಣ ವೈದ್ಯರಿಗೆ ಸೂಕ್ತ ದುರಸ್ತಿಗೆ ಸಹಾಯವಾಗುತ್ತದೆ.
 
ಟಿಇಇಯಿಂದ ಸಮಸ್ಯೆ ಇದೆಯೇ?
ಚಿಕಿತ್ಸೆ ವೇಳೆಗೆ ಗಂಟಲು ಕಟ್ಟುವಿಕೆ ಮತ್ತು ಗಂಟಲು ಅಸ್ವಸ್ಥತೆ ಟಿಇಇಯ ಸಾಮಾನ್ಯ ಸಮಸ್ಯೆ. ಆದರೆ ಅರಿವಳಿಕೆ ಈ ಸಮಸ್ಯೆಯನ್ನು ಕನಿಷ್ಠಗೊಳಿಸುತ್ತದೆ. ಶಸ್ತ್ರಕ್ರಿಯೆಯ ನಂತರ ಕೆಲವು ದಿನಗಳ ತನಕ ರೋಗಿಗಳು ಗಂಟಲು ನೋವಿನಿಂದ ನರಳುತ್ತಾರೆ. ಅಪರೂಪಕ್ಕೆ ಎಸೊಫಗಸ್ನಲ್ಲಿ ತೂತು ಉಂಟಾಗಬಹುದು ಮತ್ತು ಕೆಲವೊಮ್ಮೆ ರಕ್ತಸ್ರಾವ ಉಂಟಾದರೂ ಆಗಬಹುದು.
 

ವೆಬ್ದುನಿಯಾವನ್ನು ಓದಿ