ಕ್ಯಾರೆಟ್‌ನಲ್ಲಿದೆ ಹಲವಾರು ಆರೋಗ್ಯಕರ ಲಾಭಗಳು

ಮಂಗಳವಾರ, 19 ಜೂನ್ 2018 (14:05 IST)
ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ಅಷ್ಟೆ ಅಲ್ಲ ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳಿವೆ. ಕ್ಯಾರೆಟನ್ನು ನೈಸರ್ಗಿಕ ವಿಟಮಿನ್ ಮತ್ತು ಪೋಷಕಾಂಶ ಹೊಂದಿರುವ ಚಿನ್ನದ ಗಣಿಯಾಗಿದೆ. ಕ್ಯಾರೆಟ್ ಸೇವನೆಯಿಂದ ಕೇವಲ ಆರೋಗ್ಯ ಮಾತ್ರವಲ್ಲ, ಸೌಂದರ್ಯವೂ ಹೆಚ್ಚುತ್ತದೆ. ಅವು ಯಾವುವು ನೋಡೋಣ.
* ಕ್ಯಾರೆಟ್ ಸೇವನೆಯಿಂದ ಹೃದಯದ ಸಮಸ್ಯೆಗಳು, ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆ ಮಾಡಬಹುದು.
 
* ಕ್ಯಾರಟ್ ನಲ್ಲಿ ಪೋಷಕಾಂಶಗಳು, ಆಂಟಿಆಕ್ಸಿಡೆಂಟ್, ಖನಿಜಾಂಶಗಳು ಸಾಕಷ್ಟಿದ್ದು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
* ಕ್ಯಾರೆಟ್‌ಗಳಲ್ಲಿರುವ ವಿಟಮಿನ್ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೇ ಮೊಡವೆಗಳನ್ನು ಕೊನೆಗೊಳಿಸಲೂ ನೆರವಾಗುತ್ತದೆ. 
 
* ಕ್ಯಾರೆಟ್ ಜೊತೆ ಪಾಲಾಕ್ ಮತ್ತು ಬೀಟ್ ರೂಟ್ ಸೇರಿಸಿ ಬೆಳಗ್ಗಿನ ಸಮಯ ಜ್ಯೂಸ್ ಮಾಡಿ ಕುಡಿದರೆ ಆರೋಗ್ಯದ ಕುರಿತು ಚಿಂತಿಸುವ ಅಗತ್ಯವೇ ಇರುವುದಿಲ್ಲ.
 
* ಆಹಾರದಲ್ಲಿ ಕ್ಯಾರೆಟ್ ಬಳಸಿದರೆ ಪಚನ ಕ್ರಿಯೆ ವೃದ್ಧಿಸಿ ಜೀವಕೋಶಗಳು ವಯಸ್ಸಾಗುವುದನ್ನು ಮುಂದೂಡುತ್ತದೆ ಎನ್ನುತ್ತಾರೆ ತಜ್ಞರು.
 
* ಕ್ಯಾರೆಟ್ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. 
 
* ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ.
 
* ಕ್ಯಾರೆಟ್ ಸೇವನೆಯಿಂದ ಹೃದಯದ ರಕ್ತನಾಳಗಳ ದ್ವಾರದಲ್ಲಿ ಬೇಡದ ಕೊಬ್ಬು ಸಂಗ್ರಹವಾಗುವುದು ತಡೆಗಟ್ಟಬಹುದು. ಕೊಬ್ಬಿನಂಶ ನಿಯಂತ್ರಿಸುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
 
* ಗಾಯವಾದಾಗ ಕ್ಯಾರೆಟ್‌ ರಸವನ್ನು ಅದರ ಮೇಲೆ ಹಚ್ಚಿಕೊಳ್ಳಿ. ಕ್ಯಾರೆಟ್‌ನಲ್ಲಿ ಇರುವ ಕೆರೋಟಿಯನಾಯ್ಡ್‌ ಅಂಶ ನಿಮ್ಮ ಚರ್ಮಕ್ಕೆ ಆಗಿರೋ ಗಾಯವನ್ನು ವಾಸಿ ಮಾಡುತ್ತದೆ.
 
* ಕ್ಯಾರೆಟ್ಟುಗಳಲ್ಲಿರುವ ಅವಶ್ಯಕ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.
 
* ಕ್ಯಾರೆಟ್‌ಗಳು ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಕ್ಯಾರೆಟ್ ಇದನ್ನು ಪರಿಹಾರಿಸುತ್ತದೆ.
 
* ಕ್ಯಾರೆಟ್ ಎಲ್ಲ ರೀತಿಯ ದಂತ ಸಮಸ್ಯೆಗಳಿಂದ ದೂರವುಳಿಸುತ್ತದೆ.
 
* ಕ್ಯಾರೆಟ್‌ನಲ್ಲಿರೋ ವಿಟಮಿನ್‌ ಎ ಅಂಶ ನಿಮ್ಮ ಹಲ್ಲು ಹಾಗೂ ಮೂಳೆಗಳನ್ನು ಗಟ್ಟಿಗೊಳ್ಳುವಂತೆ ಮಾಡುತ್ತದೆ.
 
* ಕ್ಯಾರೆಟ್‌ನಲ್ಲಿ ನಾರಿನ ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ.
 
* ಕ್ಯಾರೆಟ್‌ನಲ್ಲಿರುವ ವಿಟಮಿನ್‌ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೆ ಮೊಡವೆಗಳನ್ನು ಕೊನೆಗೊಳಿಸಲು ನೆರವಾಗುತ್ತದೆ.
 
* ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಸೆಳೆತ ಹೆಚ್ಚಾಗಿ ಈ ತೊಂದರೆಗಳಿಂದ ಬಹುಕಾಲ ರಕ್ಷಣೆ ಪಡೆಯಬಹುದು.
 
* ಮಧುಮೇಹವಿರುವವರು ಹಸಿ ಕ್ಯಾರೆಟ್ ತಿನ್ನುವುದರಿಂದ ತಮ್ಮ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ