ಬಾಲ್ಯದಲ್ಲಿ ಹುಡುಗಾಟ ಮಾಡುವುದು ಸಹಜ, ಆದರೆ ಮನುಷ್ಯ ದೊಡ್ಡವನಾಗುತ್ತಿದಂತೆ ಅವನಲ್ಲಿ ಪ್ರೌಢತೆ ಬಂದಿರುತ್ತದೆ. ಆದರೆ ಅಧ್ಯಯನವೊಂದರ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮೆಚ್ಯೂರಿಟಿ ಹೊಂದಿರುತ್ತಾರೆ. ಪುರುಷರಲ್ಲಿ ಮೆಚ್ಯೂರಿಟಿಯ ಅಭಾವವಿರುತ್ತದೆ.
ಜಗಳದ ನಂತರ ಮೌನವಾಗಿರುವುದು, ಟ್ರಾಫಿಕ್ ರೂಲ್ಸ್ ಮುರಿಯುವುದು, ಕೊಳಕು ಪದಗಳನ್ನು ಬಳಸಿ ಕಿಸಿಕಿಸಿ ನಗುವುದು .. ಇವೆಲ್ಲ ಪುರುಷರ ಅಭ್ಯಾಸಗಳಿರುತ್ತವೆ. ಇದರಿಂದ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಬಾಲಕರಂತೆ ಕಾಣುತ್ತಾರೆ .