ಸುಸ್ಥಿರ ಆರೋಗ್ಯಕ್ಕೆ ಮನೆಮದ್ದಿನ ರಾಮಬಾಣ

ಸೋಮವಾರ, 6 ಜನವರಿ 2014 (12:05 IST)
PR
ಪ್ರತಿದಿನ ಮುಂಜಾನೆ ಮತ್ತು ಸಂಜೆ ತಪ್ಪದೆ ನೆನೆಸಿಟ್ಟ 4 ಬಾದಾಮಿಯನ್ನು ಸಿಪ್ಪೆ ತೆಗೆದು ಸೇವಿಸಿ. ಒಂದು ಲೋಟ ಹಾಲಿಗೆ ಅರ್ಧ ಚಮಚೆದಷ್ಟು ಬಾದಾಮಿ ಎಣ್ಣೆ ಸೇರಿಸಿ ಸೇವಿಸಿ. ಉತ್ತಮ ಜ್ಞಾಪಕ ಶಕ್ತಿ ನಿಮ್ಮದಾಗುತ್ತದೆ.

ಆಹಾರದಲ್ಲಿ ತುಪ್ಪದಿಂದ ಮಾಡಿದ ಸಿಹಿಯನ್ನು ಬಳಸಿರಿ. ಅಲ್ಲದೆ ಹಸುವಿನ ಹಾಲು ಅದರಿಂದ ತಯಾರಾದ ತುಪ್ಪವನ್ನು ಬಳಸಿ. ಕಾರ ಹುಳಿ ಮತ್ತು ಮಸಾಲೆ ಪದಾರ್ಥಗಳ ಬಳಕೆ ಮಾಡದಿರಿ.

ಹಲ್ಲು ನೋವಿಗೆ ಅರ್ಧ ಸ್ಪೂನ್ ತ್ರಿಫಲ ಪುಡಿಗೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಬೆರಸಿ ಇದರಿಂದ ಹಲ್ಲು ಉಜ್ಜಿದರೆ ಹಲ್ಲು ನೋವು ದೂರವಾಗುತ್ತದೆ. ಈ ಚೂರ್ಣವನ್ನು ಪ್ರತಿದಿನ ಬಳಕೆ ಮಾಡ ಬಹುದಾಗಿದೆ. ಅಷ್ಟೇ ಅಲ್ಲದೆ ಇದು ವಸಡಿನ ಊತ, ನೋವನ್ನು ದೂರ ಮಾಡುತ್ತದೆ.

ಲವಂಗದ ಎಣ್ಣೆ ಇಲ್ಲವೇ ಆರೋಮ್ಯಾಟಿಕ್ ಎಣ್ಣೆಯನ್ನು ಅಂಗಡಿಯಿಂದ ತಂದುಸ್ವಲ್ಪ ಹತ್ತಿ ಯಲ್ಲಿ ಅದ್ದಿ ನೋವಿರುವ ಜಾಗದಲ್ಲಿ ಅದನ್ನು ಇಡಿ ಆಗ ನೋವಿನ ಪ್ರಮಾಣ ಕಡಿಮೆ ಆಗುತ್ತದೆ..
ಸೂಚನೆ: ನಿಮ್ಮ ನೋವು ಹೆಚ್ಚಿದ್ದರೆ.. ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ. ಶಾಶ್ವತ ಪರಿಹಾರ ಪಡೆಯಿರಿ.

ವೆಬ್ದುನಿಯಾವನ್ನು ಓದಿ