ಬೆಂಗಳೂರು: ದೇಶ ಕಾಯುವ ಸೈನಿಕರಲ್ಲಿ ಮನುಷ್ಯರು ಮಾತ್ರವಲ್ಲ ಶ್ವಾನಗಳು ಕೂಡ ಇರುತ್ತವೆ. ಈ ಶ್ವಾನಗಳು ಸೈನಿಕರಿಗೆ ಶತ್ರುಗಳು ಅಡಗಿಸಿಟ್ಟಿರುವ ಬಾಂಬುಗಳನ್ನು ಹುಡುಕಲು ಹಾಗು ಭಯೋತ್ಪಾದಕರ ಅಡಗುತಾಣಗಳನ್ನು ಹುಡುಕುವ ಇತ್ಯಾದಿ ಕಾರ್ಯಗಳನ್ನು ಮಾಡುತ್ತವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಗೆಳೆಯ ಸಹಾಯ ಮಾಡದೆ ಹಿಂದೇಟು ಹಾಕಬಹುದು ಆದರೆ ಶ್ವಾನಗಳು ಯಾವತ್ತು ಹಿಂಜರಿಯುವುದಿಲ್ಲ.
ದೇಶದ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನಗಳನ್ನು ನಿವೃತ್ತಿಯ ನಂತರ ವಿಷ ಉಣಿಸಿ ಚಿರನಿದ್ರೆಗೆ ಜಾರಿಸುತ್ತಾರಂತೆ. ಏಕೆಂದರೆ ಸೇನೆಯಲ್ಲಿ ಲೆಬ್ರಿಡೋರ್, ಜರ್ಮನ್ ಶೆಫರ್ಡ್ ಹಾಗು ಬೆಲ್ಜಿಯಾನ್ ಶೆಫರ್ಡ್ ಎಂಬ 3 ತಳಿಯ ನಾಯಿಗಳಿರುತ್ತದೆ. ಸೇನೆಗೆ ಸೇರಲ್ಪಡುವ ನಾಯಿಗಳಿಗೆ ಊಟೋಪಚಾರದ ಜೊತೆಗೆ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನಹರಿಸಬೇಕಾಗುತ್ತದೆಯಂತೆ. ಹಾಗೆ ಅವು ಪ್ರತಿಕ್ಷಣವು ಅಲರ್ಟ್ ಆಗಿರುವಂತೆ ವಿಶೇಷ ತರಬೇತಿ ನೀಡಲಾಗುತ್ತದೆಯಂತೆ.
ನಾಯಿಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಅನಾರೋಗ್ಯವಾಗಿದ್ದರೆ ಹಾಗು ಕಾರ್ಯ ಮಾಡಲು ಅಸಮರ್ಥವಾಗಿದ್ದರೆ ಅಂತಹ ನಾಯಿಗಳಿಗೆ ಯುತನೇಶಿಯಾ ಎಂಬ ವಿಷ ಉಣಿಸಿ ಕೊಲ್ಲಲಾಗುತ್ತದೆಯಂತೆ.
ಇದಕ್ಕೆ ಕಾರಣ ಒಂದು ಈ ಶ್ವಾನಗಳಿಗೆ ಸೇನೆಯ ಸಂಪೂರ್ಣ ಲೊಕೇಶನ್ ಹಾಗು ರಹಸ್ಯಗಳು ತಿಳಿದಿರುವುದರಿಂದ ಅಪಾಯದ ಸಾಧ್ಯತೆಗಳಿರುತ್ತದೆ. ಎರಡನೇಯದಾಗಿ ಸೇನೆಯಲ್ಲಿ ನೀಡಿದ ಸೌಲಭ್ಯ, ಊಟೋಪಚಾರ ಹಾಗು ಆರೈಕೆ ಬೇರೆ ಕಡೆ ನೀಡಲು ಸಾಧ್ಯವಿಲ್ಲ. ಹಾಗು ಶ್ವಾನಗಳಿಗೆ ಬೇರೆಕಡೆ ಜೀವಿಸಲು ಸಾಧ್ಯವಿಲ್ಲ.