ಸ್ತ್ರೀಯರ ಆ ದಿನಗಳ ಹೊಸ ಸಂಗಾತಿ

ಭಾನುವಾರ, 16 ಜುಲೈ 2017 (15:17 IST)
ಬೆಂಗಳೂರು:ಮಹಿಳೆಯರ ಆ ದಿನಗಳು ಬಂತೆಂದರೆ ಏನೋ ಕಿರಿಕಿರಿ, ಅಸಂತೋಷ. ಸಂಕಟ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ  ಮಹಿಳೆಯರ ಋತುಶ್ರಾವದ ದಿನಗಳಲ್ಲಿ ಜೊತೆಯಾಗಲು ಪರಿಸರ ಸ್ನೇಹಿಯಾದ ಶೀ-ಕಪ್ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
 
ಹೆಣ್ಣು ಋತುಶ್ರಾವದ ಸಂದರ್ಭದಲ್ಲಿ ಆಕೆ ಅನುಭವಿಸುವ ದೈಹಿಕ, ಮಾನಸಿಕ, ಭಾವನಾತ್ಮಕ ಕ್ಲೇಶಗಳ ಬಗ್ಗೆ, ನಿರುತ್ಸಾಹದ ಬಗ್ಗೆ ಅನುಭವಿಸುವ ಅಕೆಗೆ ಮಾತ್ರಗೊತ್ತು. ಇಂತಹ ಸಂಕಷ್ಟಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ್ ಶೀ-ಕಪ್ ಹೊಸ ಸಾಥಿಯಾಗಿ ಬಂದಿದೆ. ಇದು ಬಳಕೆಗೆ ಸುಲಭವಾದ, ಬಟ್ಟೆ, ಸ್ಯಾನಿಟರಿ ಪ್ಯಾಡ್, ಟ್ಯಾಂಪಾನ್‌ಗಳಿಗಿಂತಲೂ ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ ಅಲ್ಲದೇ ಪರಿಸರಸ್ನೇಹಿ ಋತುಸ್ರಾವದ ಸಂಗ್ರಹವಸ್ತುವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ.
 
ಮೆಡಿಕಲ್ ಗ್ರೇಡ್ ಸಿಲಿಕೋನ್‌ನಿಂದ ಮಾಡಿದ ಈ ಪುಟ್ಟ ಗುಲಾಬಿ ಅಥವಾ ತಿಳಿನೀಲಿ ಬಣ್ಣದ ಬಟ್ಟಲನ್ನು ಒಮ್ಮೆ ಕೊಂಡರೆ ಹಲವು ವರ್ಷಗಳವರೆಗೆ ಪುನರ್ಬಳಕೆ ಮಾಡಬಹುದು. ಅದು ಸ್ತ್ರೀಜನನಾಂಗ – ಯೋನಿಯ ಒಳಗೆ ಸೇರಿ ಗರ್ಭಕಂಠಕ್ಕೆ (cervix) ತಾಗಿಕೊಂಡು ನಿಶ್ಚಲ ನಿಲ್ಲುತ್ತದೆ. ಹಾಗಾಗಿ ಅದು ‘ಎಲ್ಲೋ’ ಕಳೆದುಹೋಗಬಹುದು ಎಂಬ ಚಿಂತೆ ಬೇಡ. ಸುಮಾರು 8 ಘಂಟೆಗಳ ಕಾಲ ಶೀ-ಕಪ್ ನಿಮ್ಮೊಳಗೆ, ತನ್ನ ಅಸ್ತಿತ್ವದ ಗುರುತೇ ಸಿಗದಷ್ಟು ಅನಾಯಾಸವಾಗಿ, ನಿಮ್ಮ ಋತುಸ್ರಾವದ ರಕ್ತವನ್ನು ಸಂಗ್ರಹಿಸಿಕೊಳ್ಳುತ್ತದೆ. ನಿಮಗೆ ಪ್ಯಾಡ್‌ಗಳನ್ನು 2-3 ತಾಸಿಗೊಮ್ಮೆ ಬದಲಿಸುವಂತೆ ಯಾವ ಒತ್ತಡವೂ ಇರುವುದಿಲ್ಲ.
 
ಪ್ರತಿ ತಿಂಗಳು ಋತುಶ್ರಾವ ನಿಂತ ನಂತರ ಶೀ-ಕಪ್ ಬಿಸಿನೀರಿನಲ್ಲಿ 20 ನಿಮಿಷ ಇಡಿ.  ಅದನ್ನು ಮತ್ತೆ ಮುಂದಿನ ತಿಂಗಳವರೆಗೆ ಅದರ ಚೀಲದಲ್ಲಿ ವಿರಮಿಸಲು ಬಿಡಬಹುದು. ಋತುಮತಿಯಾದಾಗ ಉಂಟಾಗುವ ಎಷ್ಟೋ ಇರುಸುಮುರುಸುಗಳಿಂದ ಇದರಿಂದ ಮುಕ್ತಿ ಪಡೆಯಬಹುದು.  
 

ವೆಬ್ದುನಿಯಾವನ್ನು ಓದಿ