ಬಿಸಿ ಹಾಲಿಗೆ ಜೇನು ತುಪ್ಪ ಸೇರಿಸಿದರೆ ವಿಷವಾಗುತ್ತಾ?!

ಗುರುವಾರ, 1 ಫೆಬ್ರವರಿ 2018 (08:39 IST)
ಬೆಂಗಳೂರು: ಬಿಸಿ ಬಿಸಿ ಹಾಲಿಗೆ ಸಕ್ಕರೆ ಬದಲು ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ ಎಂದು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಇದನ್ನು ಓದಿ.
 

ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ. ಹಲವು ಆಯುರ್ವೇದ ಔಷಧಗಳಲ್ಲಿ ಜೇನು ತುಪ್ಪ ಬಳಸಲಾಗುತ್ತದೆ. ಆದರೆ ತಣ್ಣಗೆ ಇರುವಾಗಲೇ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಆದರೆ ಇದನ್ನು ಬಿಸಿ ಮಾಡಬಾರದು. ಬಿಸಿ ಮಾಡಿದ ತಕ್ಷಣ ವಿಷಕಾರಿಯಾಗುತ್ತದೆ. ಇದೊನ್ನು ಬಿಸಿ ಮಾಡಿದಾಗ ಎಚ್ಎಂಎಫ್ ಎನ್ನುವ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಅರೋಗ್ಯಕ್ಕೆ ಒಳ್ಳೆಯದಲ್ಲ. ಜೇನು ತುಪ್ಪ ಎಂದಲ್ಲ, ಸಕ್ಕರೆ ಅಂಶವಿರುವ ಯಾವುದೇ ಆಹಾರ ವಸ್ತುವಾದರೂ ಬಿಸಿ ಮಾಡಿ ಬಳಸುವುದು ಉತ್ತಮವಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ