ಕುಡಿಯುವ ಚಹಾಕ್ಕೆ ಸ್ವಲ್ಪ ತಳಸಿ ಹಾಕಿ ಟ್ವಿಸ್ಟ್ ಕೊಡಿ!

ಗುರುವಾರ, 1 ಫೆಬ್ರವರಿ 2018 (08:35 IST)
ಬೆಂಗಳೂರು: ತುಳಸಿ ಆಯುರ್ವೇದ ಔಷಧಗಳಲ್ಲಿ ಸಾಕಷ್ಟು ಬಳಕೆಯಾಗುತ್ತದೆ. ಈ ತುಳಸಿ ಎಲೆಯನ್ನು ಚಹಾಕ್ಕೆ ಹಾಕಿ ನೋಡಿ! ಇದರಿಂದ ಆರೋಗ್ಯದಲ್ಲಾಗುವ ಬದಲಾವಣೆಗಳು ಏನು ಗೊತ್ತಾ?!
 

ಉಸಿರಾಟದ ಸಮಸ್ಯೆಗೆ
ಅಸ್ತಮಾದಂತಹ ಅಲರ್ಜಿಕಾರಕ ಉಸಿರಾಟದ ಸಮಸ್ಯೆಯಿದ್ದರೆ ತುಳಸಿ ಸಹಿತ ಚಹಾ ಸೇವಿಸಿ. ತುಳಸಿಯಲ್ಲಿ ಅಲರ್ಜಿ ನಿವಾರಿಸುವ ಅಂಶವಿದೆ.

ಒತ್ತಡ ಕಡಿಮೆ ಮಾಡುತ್ತದೆ
ಕೆಲವು ಅಧ್ಯಯನಗಳ ಪ್ರಕಾರ ತುಳಸಿಯಲ್ಲಿ ಒತ್ತಡ ಹಾರ್ಮೋನ್ ಶಾಂತಗೊಳಿಸುವ ಗುಣವಿದೆ. ಹೀಗಾಗಿ ಚಹಾ ಜತೆಗೆ ತುಳಸಿ ಸೇರಿಸಿ ಸೇವಿಸುವುದರಿಂದ ಒತ್ತಡದಿಂದ ಮುಕ್ತಿ ಹೊಂದುತ್ತೀರಿ.

ರಕ್ತದೊತ್ತಡ
ನಿಯಮಿತವಾಗಿ ತುಳಸಿ ಹಾಕಿದ ಚಹಾ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಹಲ್ಲಿನ ಆರೋಗ್ಯಕ್ಕೂ ಒಳ್ಳೆಯದು
ತುಳಸಿಯಲ್ಲಿರುವ ಆರೋಗ್ಯಕರ ಅಂಶ ಹಲ್ಲು ಮತ್ತು ವಸಡಿನಲ್ಲಿರುವ ಬ್ಯಾಕ್ಟೀರಿಯಾ, ಕ್ರಿಮಿಗಳನ್ನು ನಾಶ ಮಾಡುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ