ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಆರೋಗ್ಯಕರವೇ?

ಬುಧವಾರ, 31 ಜನವರಿ 2018 (08:35 IST)
ಬೆಂಗಳೂರು: ಸಾಮಾನ್ಯವಾಗಿ ನಾವು ನಮ್ಮ ಆಹಾರದಲ್ಲಿ ಸಾಕಷ್ಟು ತುಪ್ಪ ಬಳಸುತ್ತೇವೆ. ತುಪ್ಪ ಹಾಕಿ ಚಪಾತಿ ತಿನ್ನುವ ಅಭ್ಯಾಸ ನಮಗಿರುತ್ತದೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ?
 

ನಮ್ಮ ಹಿರಿಯರ ಕಾಲದಿಂದಲೂ ಚಪಾತಿ, ದೋಸೆಗೆ ಸಾಕಷ್ಟು ತುಪ್ಪ ಹಾಕಿ ಸೇವಿಸುವ ಪದ್ಧತಿಯಿದೆ. ತುಪ್ಪ ಸೇವಿಸುವುದರಿಂದ ದಪ್ಪಗಾಗುವುದಿಲ್ಲ ಎಂದು ಸಾಕಷ್ಟು ಅಧ್ಯಯನಗಳಿಂದ ತಿಳಿದುಬಂದಿದೆ.

ಹಾಗೇ ತುಪ್ಪ ಹಾಕಿ ಸೇವಿಸುವುದರಿಂದ ಬೇಗನೇ ಹೊಟ್ಟೆ ತುಂಬುವುದು. ಅಷ್ಟೇ ಅಲ್ಲ, ತುಪ್ಪ ಹಾಕಿ ಚಪಾತಿ ಸೇವಿಸುವುದರಿಂದ ಬೇರೆ ಆಹಾರ, ಹಾಳು ಮೂಳು ತಿನ್ನಬೇಕೆಂದು ನಿಮಗೆ ಅನಿಸುವುದೇ ಇಲ್ಲ.

ಅಷ್ಟೇ ಅಲ್ಲ, ಚಪಾತಿಗೆ ತುಪ್ಪ ಹಾಕಿ ಟಿಫಿನ್ ಬಾಕ್ಸ್ ನಲ್ಲಿ ಎಷ್ಟು ಹೊತ್ತಿಟ್ಟರೂ ಚಪಾತಿ ಮೃದುವಾಗಿಯೇ ಇರುತ್ತದೆ. ಅಷ್ಟೇ ಅಲ್ಲ, ಚಪಾತಿಗೆ ತುಪ್ಪ ಹಾಕಿ ಸೇವಿಸುವುದರಿಂದ ಅದು ಬೇಗನೇ ಜೀರ್ಣವಾಗುವುದು ಕೂಡಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ