ಬೆಂಗಳೂರು : ಕಾಯಿಲೆಗಳ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರಬೇಕೆಂದು ಹೇಳುತ್ತಾರೆ. ಆದರೆ ಈ ರೋಗ ನಿರೋಧಕ ಶಕ್ತಿ ಅಧಿಕವಾದರೂ ಕೂಡ ಕೆಲವೊಮ್ಮೆ ಅಪಾಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ.
ಹೌದು. ರೋಗಗಳ ವಿರುದ್ಧ ಹೋರಾಡಲು ರೋಗನಿರೋಧ ಶಕ್ತಿಯನ್ನು ಹೆಚ್ಚಿಸಬೇಕೆಂದು ಹಲವು ಬಗೆಯ ಮನೆಮದ್ದುಗಳನ್ನು ಸೇವಿಸುತ್ತೇವೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುವ ಸಂಭವವಿರುತ್ತದೆಯಂತೆ.
ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಸರಿಯಾಗಿ ನೀರು ಕುಡಿಯಿರಿ, 8 ಗಂಟೆಗಳ ಕಾಲ ನಿದ್ರೆ ಮಾಡಿ. ಉಪ್ಪು , ಹುಳಿ, ಖಾರ, ಒಗರು, ಸಿಹಿ, ಕಹಿ ಈ ರೀತಿಯ ಆಹಾರವನ್ನು ಪ್ರತಿದಿನ ಸಮಾನವಾಗಿ ಸೇವಿಸಿ. ಇದರಿಂದ ನಿಮ್ಮ ಎಷ್ಟು ಬೇಕೋ ಅಷ್ಟೇ ರೋಗ ನಿರೋಧಕ ಶಕ್ತಿ ಇದ್ದು, ನೀವು ಆರೋಗ್ಯವಾಗಿರುತ್ತೀರಿ ಎಂದು ತಜ್ಞರು ಹೇಳುತ್ತಾರೆ.