ದೇಹವನ್ನು ಬೆವರಿನ ದುರ್ಗಂಧದಿಂದ ದೂರವಿರಿಸಲು ಇದನ್ನು ಹಚ್ಚಿ

ಭಾನುವಾರ, 16 ಆಗಸ್ಟ್ 2020 (09:50 IST)
ಬೆಂಗಳೂರು : ನಮ್ಮ ದೇಹದಲ್ಲಿ ಬೆವರನ್ನು ಸೃಷ್ಟಿಸುವ  ಸಾವಿರಾರು ಗ್ರಂಥಿಗಳಿವೆ. ದೇಹದ ಉಷ್ಣಾಂಶ ಹೆಚ್ಚಾದಾಗ ಎಕ್ರಿನ್ ಗ್ರಂಥಿಗಳು ಬೆವರನ್ನು ಉತ್ಪಾದಿಸುತ್ತವೆ. ಈ ಬೆವರನಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಾಗ ಅದರಿಂದ ದೇಹ ದುರ್ವಾಸನೆ ಬರಲು ಶುರುವಾಗುತ್ತದೆ. ಇದನ್ನು ಕಡಿಮೆ ಮಾಡಲು ಇದನ್ನು ಹಚ್ಚಿ.

ಆಪಲ್ ಸೈಡರ್ ವಿನೆಗರ್ : ಇದು ಬೆವರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲ್ಲು ಸಹಕಾರಿ. ವಿನೆಗರ್ ನ್ನು ಬಿಸಿ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ದೇಹದಲ್ಲಿ ಬೆವರಿನ ದುರ್ವಾಸನೆಯಿಂದ ಕಾಪಾಡಬಹುದು.

ಆಲೂಗಡ್ಡೆ: ಇದು ದೇಹದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಮತ್ತು ಅತಿಯಾಗಿ ಬೆವರುವುದನ್ನು ನಿವಾರಿಸುತ್ತದೆ. ಬೇವರು ಬರುವ ಸ್ಥಳಗಳಲ್ಲಿ ಆಲೂಗಡ್ಡೆಯನ್ನು ಪೀಸ್ ಗಳಿಂದ ಉಜ್ಜಬೇಕು ಅಥವಾ ಹತ್ತಿಯ ಸಹಾಯದಿಂದ ಅದರ ರಸವನ್ನು ಹಚ್ಚಬೇಕು. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಬೆವರುವುದು ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ