ಎಲೆಕೋಸು ಪಲ್ಯ

ಭಾನುವಾರ, 16 ಆಗಸ್ಟ್ 2020 (07:43 IST)
ಬೆಂಗಳೂರು : ಎಲೆಕೋಸು ಪಲ್ಯ ಊಟಕ್ಕೆ ಹೆಚ್ಚು ರುಚಿಯನ್ನು ಕೊಡುತ್ತದೆ. ಈ ಎಲೆಕೋಸು ಪಲ್ಯ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಅವರೆ ಕಾಳು, 1 ಕಪ್ ಕತ್ತರಿಸಿದ ಎಲೆಕೋಸು, ½ ಕಪ್ ಕ್ಯಾರೆಟ್ ತುರಿ, ½ ಕಪ್ ಕತ್ತರಿಸಿದ ಈರುಳ್ಳಿ, ¼ ಕಪ್ ತೆಂಗಿನ ಕಾಯಿ ತುರಿ, ಉಪ್ಪು, 1 ಚಮಚ ಎಣ್ಣೆ, 1 ಚಮಚ ಸಾಸಿವೆ, ¼ ಚಮಚ ಅರಿಶಿನ, 1 ಚಮಚ ಚನ್ನಾ ದಾಲ್, 1 ಚಮಚ ಉದ್ದಿನ ಬೇಳೆ, 4 ಹಸಿಮೆಣಸಿನ ಕಾಯಿ, ಕರಿಬೇವು.

ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಚನ್ನಾ ದಾಲ್, ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಕರಿಬೇವು ಸೇರಿಸಿ ಒಗ್ಗರಣೆ ಹಾಕಿ. ಬಳಿಕ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಆಮೇಲೆ ಎಲೆಕೋಸು, ಅವರೆ ಕಾಳು, ಕ್ಯಾರೆಟ್ ಹಾಕಿ ಸ್ವಲ್ಪ ನೀರು ಹಾಕಿ ಉಪ್ಪು, ಅರಶಿನ  ಹಾಕಿ ಬೇಯಿಸಿ. ಬೆಂದ ನಂತರ ತೆಂಗಿನ ಕಾಯಿ ತುರಿ ಸೇರಿಸಿ 2 ನಿಮಿಷ ಬೇಯಿಸಿದರೆ ಎಲೆಕೋಸು ಪಲ್ಯ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ