ಬೆಂಗಳೂರು : ಖರ್ಜೂರ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಸಿಹಿತಿಂಡಿಗಳನ್ನು ಮಾಡಲು ಬಳಸುತ್ತಾರೆ. ಹಾಗೇ ಇದರಿಂದ ಚಟ್ನಿ ಕೂಡ ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು : 20 ಖರ್ಜೂರಗಳು, 1 ½ ಕಪ್ ನೀರು, 1 ಚಮಚ ಜೀರಿಗೆ, ½ ಒಣ ಮೆಣಸಿನ ಕಾಯಿ ಪುಡಿ, ಸಣ್ಣ ಗಾತ್ರದ ಹುಣಸೆಹಣ್ಣು, ಉಪ್ಪು.
ಮಾಡುವ ವಿಧಾನ : ಮೊದಲಿಗೆ ಖರ್ಜೂರವನ್ನು ಜೀರಿಗೆ ಮತ್ತು ಹುನಸೆಹಣ್ಣು ಸೇರಿಸಿ 15 ನಿಮಿಷಗಳ ಕಾಲ ಬೇಯಿಸಿ. ಅದು ತಣ್ಣಗಾಗಲು ಬಿಡಿ. ಬಳಿಕ ಇದಕ್ಕೆ ಮೆಣಸಿನ ಪುಡಿ, ಉಪ್ಪು, ಸೇರಿಸಿ ಮಿಕ್ಸಿಯಲ್ಲಿ ರುಬ್ಬಿದರೆ ಖರ್ಜೂರ ಚಟ್ನಿ ರೆಡಿ.