ಬೆಂಗಳೂರು : ಸಂಜೆಯ ವೇಳೆ ಏನಾದರೂ ರುಚಿಕರವಾದುದನ್ನು ತಿನ್ನಬೇಕೆಂದು ಬಯಸುವವರು ಅಣಬೆ ಮೊಟ್ಟೆ ದೋಸೆ ಮಾಡಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : ಅಣಬೆ 10-12, ಬೆಳ್ಳುಳ್ಳಿ 4-5 ಎಸಳು, ಈರುಳ್ಳಿ 1, ಹಸಿಮೆಣಸು 2, ಈರುಳ‍್ಳಿ ಸೊಪ್ಪು, ಮೊಟ್ಟೆ 4, ಹಾಲು 2 ಚಮಚ, ಕಾಳು ಮೆಣಸಿನ ಪುಡಿ ½ ಚಮಚ, ಚೀಸ್ ½ ಕಪ್, ಎಣ್ಣೆ, ಉಪ್ಪು.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ‍್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಆಮೇಲೆ ಅಣಬೆ, ಉಪ್ಪು, ಕಾಳು ಮೆಣಸಿನ ಪುಡಿ, ಮಿಕ್ಸ್ ಮಾಡಿ ಮಸಾಲೆ ರೆಡಿಮಾಡಿಟ್ಟುಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆ, ಉಪ್ಪು, ಕಾಳುಮೆಣಸಿನ ಪುಡಿ, ಹಾಲು ಮಿಕ್ಸ್ ಮಾಡಿ ತವಾದ ಮೇಲೆ ದೋಸೆ ಹಾಕಿ ಅದಕ್ಕೆ ಒಂದು ಬದಿಯಲ್ಲಿ ಮಸಾಲೆ ಹಾಕಿ ಮತ್ತೊಂದು ಬದಿಯಿಂದ ಮಡಚಿದರೆ ಅಣಬೆ ಮೊಟ್ಟೆ ದೋಸೆ ರೆಡಿ.