ಬೆಂಗಳೂರು : ಅವಲಕ್ಕಿಯಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದು ರುಚಿಕರವಾಗಿರುತ್ತದೆ. ಆದಕಾರಣ ಅವಲಕ್ಕಿಯಿಂದ ಪೊಂಗಲ್ ಮಾಡಿ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಅವಲಕ್ಕಿ, ¼ ಕಪ್ ಹೆಸರು ಬೇಳೆ, 4 ಚಮಚ ತುಪ್ಪ, ¾ ಕಪ್ ಬೆಲ್ಲ, ¼ ಕಪ್ ತೆಂಗಿನಕಾಯಿ, 1ಚಮಚ ಒಣದ್ರಾಕ್ಷಿ, 8 ಗೋಡಂಬಿ, ½ ಚಮಚ ಏಲಕ್ಕಿ ಪುಡಿ, 2 ಕಪ್ ನೀರು.
ಮಾಡುವ ವಿಧಾನ : ಮೊದಲಿಗೆ ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ. ಅದು ಬೆಂದ ಬಳಿಕ ಅದಕ್ಕೆ ಅವಲಕ್ಕಿಯನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ಬೆಲ್ಲವನ್ನು ನೀರಿನೊಂದಿಗೆ ಕರಗಿಸಿ ಆ ಪಾಕವನ್ನು ಈ ಅವಲಕ್ಕಿಯ ಮಿಶ್ರಣಕ್ಕೆ ತುಪ್ಪ ಸೇರಿಸಿ 5 ನಿಮಿಷ ಬೇಯಿಸಿ. ಆಮೇಲೆ ಒಣ ತೆಂಗಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾದಾಗ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿದರೆ ಅವಲಕ್ಕಿ ಪೊಂಗಲ್ ರೆಡಿ.