ದಪ್ಪ ಹೊಟ್ಟೆ ಕರಗಿಸಬೇಕಾದರೆ ಈ ಆಹಾರಗಳನ್ನು ತ್ಯಜಿಸುವುದೇ ಒಳ್ಳೆಯದು!
ಮಂಗಳವಾರ, 22 ಮೇ 2018 (09:44 IST)
ಬೆಂಗಳೂರು: ಕೆಲವರು ದಪ್ಪ ಹೊಟ್ಟೆಯನ್ನು ಹೊರಗೆ ಅಸಹ್ಯವಾಗಿ ಕಾಣದಂತೆ ಮಾಡಲು ಏನೇನೋ ಕಸರತ್ತು ಮಾಡುತ್ತಿರುತ್ತಾರೆ. ಆದರೆ ಅದಕ್ಕೆ ನಮ್ಮ ಆಹಾರದಲ್ಲೇ ನಿಯಂತ್ರಣ ಮಾಡಿಕೊಂಡರೂ ಸಾಕು.
ದಪ್ಪ ಹೊಟ್ಟೆಗೆ ಮುಖ್ಯ ಕಾರಣ ಅಸಿಡಿಟಿ, ಅಥವಾ ನಾವು ಕುಳಿತು ಕೆಲಸ ಮಾಡುವ ಭಂಗಿ ಇರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅದರ ಜತೆಗೆ ಕೆಲವು ಆಹಾರ ಅಭ್ಯಾಸಗಳಿಂದಲೂ ಈ ಸಮಸ್ಯೆ ಬರಬಹುದು.
ಅತೀ ಹೆಚ್ಚು ಸಕ್ಕರೆ ಅಂಶದ ಆಹಾರ ಸೇವನೆಯಿಂದ ಕೆಳಹೊಟ್ಟೆ ದಪ್ಪಗಾಗುವುದಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಅದರಂತೆ ಕೆಲವು ಜನರಿಗೆ ಸುಮಾರು 8 ವಾರಗಳ ಕಾಲ ಊಟದ ಜತೆಗೆ ಹೆಚ್ಚು ಸಕ್ಕರೆ ಅಂಶವಿರುವ ಪಾನೀಯವನ್ನೂ ಸೇವಿಸಲು ಹೇಳಲಾಯಿತು. ಆ ರೀತಿ ಮಾಡಿದ ಜನರಲ್ಲಿ ತೂಕ ಹೆಚ್ಚುವಿಕೆ ಮತ್ತು ಹೊಟ್ಟೆ ಭಾಗ ದಪ್ಪಗಾಗುವ ಲಕ್ಷಣ ಕಂಡುಬಂತು. ಹಾಗಾಗಿ ಅಧ್ಯಯನಕಾರರು ದಪ್ಪ ಹೊಟ್ಟೆ ಬಾರದಂತೆ ಮಾಡಲು ಹೆಚ್ಚು ಸಕ್ಕರೆ ಅಂಶದ ಆಹಾರ ಸೇವಿಸಬೇಡಿ ಎಂದು ಸಲಹೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.