ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಮಂಗಳವಾರ, 22 ಮೇ 2018 (08:45 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರು ಸಹ ಕುರ್ಚಿ ಅಥವಾ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದು ಒಂದು ಹಿರಿಮೆಯನ್ನು ತಂದುಕೊಡುತ್ತದೆ ಎಂಬುದು ಅವರ ಭಾವ. ಇನ್ನು ಕೆಲವರಂತೂ ನೆಲದ ಮೇಲೆ ಕುಳಿತು ಊಟ ಮಾಡುವುದು ಅಂದ್ರೆ ಕೀಳು ಅನ್ನೋ ತರದಲ್ಲಿ ಯೋಚಿಸುತ್ತಾರೆ. ಇದಕ್ಕೆಲ್ಲ ಕುರ್ಚಿ ಟೇಬಲ್ ನ ಮೋಹವೇ ಪ್ರಮುಖ ಕಾರಣ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಗುವ ಉಪಯೋಗಗಳು ಏನು ಎಂಬುದು ಇಲ್ಲಿದೆ ನೋಡಿ.


* ನೀವು ಚಕ್ಕಳಮಕ್ಕಳ ಹಾಕ್ಕೊಂಡು ಕೂರೋದು “ಸುಖಾಸನ” ನಿಜ, ಆದರೆ ಪ್ರತಿ ತುತ್ತಿಗೂ ಬಾಗಿ ಊಟ ಮಾಡುವುದರಿಂದ ಕೀರ್ಣಕ್ರಿಯೆ ಸಲೀಸಾಗುತ್ತದೆ.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಾಮಾನ್ಯವಾಗಿ ನಿಧಾನಕ್ಕೆ ಊಟ ಮಾಡುತ್ತೇವೆ. ನಿದಾನವಾಗಿ ಊಟ ಮಾಡುವುದು ಸಾಮಾನ್ಯವಾಗಿ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಿಗುವ ನೆಮ್ಮದಿ ಮತ್ಯಾವ ಬಗೆಯಲ್ಲೂ ಸಿಗುವುದಿಲ್ಲ. ನೆಮ್ಮದಿಯಿಂದ ಊಟ ಮಾಡಿದ್ರೆ ಉಸಿರಾಟ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ. ಮತ್ತು ಸೊಂಟದ ಭಾಗಕ್ಕೆ ವ್ಯಾಯಾಮ ಮಾಡಿದಂತೆ ಆಗುತ್ತದೆ, ಇದರಿಂದ ಇಳಿವಯಸ್ಸಿನಲ್ಲಿಯೂ ಆರಾಮವಾಗಿ ನಡೆಯಬಹುದು.

* ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆಯುವುದರಿಂದ ದೇಹದ ಅರೋಗ್ಯ ನಿಯಂತ್ರಣದಲ್ಲಿ ಇರುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ