ನ್ಯಾಚುರಲ್ ಸಿಸೇರಿಯನ್ ಮೂಲಕ ತಾಯಿಯ ಗರ್ಭದಿಂದ ಹೊರ ಬಂದ ಮಗು

ಶುಕ್ರವಾರ, 29 ಜುಲೈ 2016 (09:26 IST)
ಪ್ರೆಗ್ನೆನ್ಸಿ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಸುಂದರವಾದ ಅವಧಿ... ಸಂತೋಷದ ಕ್ಷಣಗಳನ್ನು ಸ್ವಾಗತಿಸುವ ಸಮಯ.. ಈ ವೇಳೆ ಪೋಷಕರು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಮಹಿಳೆ ಹೆರಿಗೆ ವೇಳೆಯಲ್ಲಿ ನೋವು ಅನುಭವಿಸುವುದು ಸಾಮಾನ್ಯ.. ಇಂದಿನ ದಿನಗಳಲ್ಲಿ ನೈಸರ್ಗಿಕ ಜನನಕ್ಕಿಂತಲೂ. ನೈಸರ್ಗಿಕ ಸಿಸೇರಿಯನ್ ಜನನದ ಹೊಸ ಟ್ರೆಂಡ್ ಹೆಚ್ಚಿದೆ.. ಈ ಕುರಿತು ವರದಿ ಇಲ್ಲಿದೆ.
ತಾಯಿಯಾಗುವ ಬಯಸುವ ಪ್ರತಿಯೊಬ್ಬ ಮಹಿಳೆಗೆ ಹೆರಿಗೆಯ ಆಯ್ಕೆ ವಿಧಾನಗಳು ಸಾಕಷ್ಟಿವೆ..  ಹಲವು ಜನನ ವಿಧಾನಗಳನ್ನು   ಇಲ್ಲಿ ಕಾಣಬಹುದು. ವಜೀನಲ್ ಸಿಸೇರಿಯನ್, ಸಿಸೇರಿಯನ್ ಸೆಕ್ಷನ್, ಸ್ರ್ತೀ ಜನನಾಂಗದ ನಂತರ ಸಿಸೇರಿಯನ್ ಎಂದು ಹೇಳಲಾಗುತ್ತದೆ.
 
ಆದರೆ ಇಂದಿನ ದಿನಗಳಲ್ಲಿ ನೈಸರ್ಗಿಕ ಸಿಸೇರಿಯನ್ ಟ್ರೆಂಡ್ ಹೆಚ್ಚಿದೆ. ನ್ಯಾಚುರಲ್ ಬರ್ತ್ ಹಾಗೂ ಸಿಸೇರಿಯನ್ ಮಿಶ್ರಣದಿಂದ ಕೂಡಿದ ಜನನವನ್ನು ನ್ಯಾಚುರಲ್ ಸಿಸೇರಿಯನ್ ಎಂದು ಹೇಳಲಾಗುತ್ತದೆ. ಇಂದಿನ ತಾಯಂದಿರಲ್ಲಿ ಈ ಟ್ರೆಂಡ್ ಪಾಪ್ಯೂಲರ್ ಆಗುತ್ತಿದೆ. 
 
ಈ ಕುರಿತು ಹೆರಿಗೆ ಶಿಕ್ಷಕ ಸೋಫಿ ಮೆಸೆಂಜರ್‌ನಲ್ಲಿ ನ್ಯಾಚುರಲ್ ಬರ್ತ್ ಬಗ್ಗೆ ವಿಡಿಯೋ ತೋರಿಸಿದ್ದಾರೆ. ಈ ವಿಡಿಯೋ ಅವರ ಸ್ನೇಹಿತರೊಬ್ಬರ ಹೆರಿಗೆಯ ವೇಳೆಯ ವಿಡಿಯೋ ಆಗಿದ್ದು, ನ್ಯಾಚುರಲ್ ಸಿಸೇರಿಯನ್ ಮೂಲಕ ಮಗು ಜನನದ ವೇಳೆ ತಾಯಿಯ ಗರ್ಭದಿಂದ ಹೊರ ಬರುವ ಕ್ಷಣವನ್ನು ತೋರಿಸಲಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ