ಮೂಗು ಮುಚ್ಚಿಕೊಂಡು ಸಂಭೋಗಿಸುವ ಪರಿಸ್ಥಿತಿ ನನ್ನದು!

ಸೋಮವಾರ, 9 ಸೆಪ್ಟಂಬರ್ 2019 (08:48 IST)
ಬೆಂಗಳೂರು: ಸಂಭೋಗ ಕ್ರಿಯೆ ಮಾಡುವಾಗ ಶುಚಿತ್ವದ ಕಡೆಗೆ ಗಮನಕೊಡಬೇಕಾದ್ದು ಅಷ್ಟೇ ಮುಖ್ಯ. ಆದರೆ ಕೆಟ್ಟ ದೇಹ ವಾಸನೆ ಲೈಂಗಿಕ ಜೀವನವನ್ನು ಹಾಳು ಮಾಡಬಹುದು.


ಕೆಲವರಿಗೆ ತಮ್ಮ ಸಂಗಾತಿಯ ದೇಹದ ಕೆಟ್ಟ ವಾಸನೆಯಿಂದಾಗಿ ಸಂಭೋಗ ಕ್ರಿಯೆಯಲ್ಲಿ ಅಸಹನೀಯ ಅನುಭವವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಜನನಾಂಗದ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಕೆಲವರಿಗೆ ವಿಪರೀತ ಬೆವರಿನ ಸಮಸ್ಯೆಯಿಂದಾಗಿ ದೇಹದ ಇತರ ಭಾಗಗಳಲ್ಲೂ ವಾಸನೆ ಸಮಸ್ಯೆಯಿರಬಹುದು.

ಇದಕ್ಕಾಗಿ ಮಾಡಬೇಕಾದ್ದೆಂದರೆ ಲೈಂಗಿಕ ಸಂಪರ್ಕಕ್ಕೂ ಮುನ್ನ ಇಬ್ಬರೂ ಹದ ಬಿಸಿ ನೀರಿನಿಂದ ಸ್ನಾನ ಮಾಡಿಕೊಂಡು
ಫ್ರೆಶ್ ಆಗಿ ಬಳಿಕವೇ ರೊಮ್ಯಾನ್ಸ್ ಮಾಡಬೇಕು. ಒಂದು ಉತ್ತಮ ಸುವಾಸನೆಯ ಪರ್ಫ್ಯೂಮ್ ಬಳಕೆ ಮಾಡುವುದು, ಶ್ರೀಗಂಧದ ಎಣ್ಣೆ ಇತ್ಯಾದಿ ಸುಗಂಧ ಭರಿತ ಎಣ್ಣೆ ಹಚ್ಚಿಕೊಂಡು ರೊಮ್ಯಾನ್ಸ್ ಮಾಡುವುದರಿಂದ ದೇಹ ವಾಸನೆ ಸಮಸ್ಯೆಯಿಂದ ತಪ್ಪಿಸಿಕೊಳ‍್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ