ಚರ್ಮದ ಸಮಸ್ಯೆಗೆ ಬೇವಿನ ಎಣ್ಣೆ ಹಚ್ಚುವ ಮುನ್ನ ಈ ವಿಚಾರ ತಿಳಿದಿರಲಿ
ಮಂಗಳವಾರ, 2 ಜುಲೈ 2019 (10:13 IST)
ಬೆಂಗಳೂರು : ಬೇವಿನ ಎಣ್ಣೆ ಚರ್ಮದ ರಕ್ಷಣೆಗೆ ಉತ್ತಮವಾದ ಮನೆಮದ್ದು ಎಂದು ಹೇಳುತ್ತಾರೆ. ಇದು ಗಾಯಕ್ಕೆ, ಮೊಡವೆಗೆ, ಚರ್ಮದ ಸಮಸ್ಯೆಗೆ ತುಂಬಾ ಉಪಯೋಗಕಾರಿ. ಆದರೆ ಎಲ್ಲರೂ ಈ ಎಣ್ಣೆಯನ್ನು ಬಳಸಿದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.
ಹೌದು. ಎಲ್ಲಾ ತರಹದ ಸ್ಕೀನ್ ನವರಿಗೆ ಈ ಎಣ್ಣೆ ಸರಿಹೊಂದಲ್ಲ. ಇದರಿಂದ ಅಡ್ಡಪರಿಣಾಮ ಕೂಡ ಉಂಟಾಗಬಹುದು. ಇದು ಎಸ್ಜಿಮಾದಂತಹ ಚರ್ಮದ ಕಾಯಿಲೆಗೆ ಕಾರಣವಾಗಬಹುದು. ಬೇವಿನ ಎಣ್ಣೆಯನ್ನು ಹಚ್ಚಿದಾಗ ಚರ್ಮದಲ್ಲಿ ದದ್ದುಗಳು ಹಾಗೂ ಉಸಿರಾಟದ ತೊಂದರೆ ಕಂಡುಬಂದಲ್ಲಿ ಈ ಎಣ್ಣೆಯನ್ನು ಬಳಸದಿರುವುದೇ ಉತ್ತಮ.
ಆದ್ದರಿಂದ ಬೇವಿನ ಎಣ್ಣೆಯನ್ನು ನಿಮ್ಮ ಚರ್ಮಕ್ಕೆ ಸುರಕ್ಷಿತವೇ ಎಂದು ತಿಳಿಯಲು ಹಚ್ಚುವ ಮೊದಲು ಚರ್ಮದ ಮೇಲೆ ಸಣ್ಣದಾಗಿ ಹಚ್ಚಿ ಪರೀಕ್ಷಿಸಬೇಕು. ಒಂದುವೇಳೆ ಎಣ್ಣೆ ಹಚ್ಚಿದ ಪ್ರದೇಶದಲ್ಲಿ ಕೆಂಪಾಗಿದ್ದರೆ ಅಥವಾ ತುರಿಕೆ ಕಂಡುಬಂದರೆ ಅದನ್ನು ಬಳಸಬಾರದು.