ಬೊಜ್ಜು ನಿವಾರಿಸಲು ಆರೋಗ್ಯಕರ ಆಹಾರಗಳು

ಶನಿವಾರ, 23 ಜುಲೈ 2016 (10:47 IST)
ರುಚಿ ರುಚಿಕರವಾದ ಆಹಾರ ಸೇವಿಸುವರಿಗೆ, ಜಂಗ್ ಫುಡ್‌ಗಳಾದ ಪಿಜ್ಜಾ, ಬರ್ಗರ್ ತಿನ್ನುವ ಅಭ್ಯಾಸವಿರುವರು ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಬೊಜ್ಜು ಬಾರದಂತೆ ನೋಡಿಕೊಳ್ಳಲು ರುಚಿಕರವಾದ ಊಟ ಹೇಗಿರಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. 

ಕೇರಳ ಸರಕಾರ ಜಂಕ್ ಫುಡ್‌ಗಳಾದ ಪಿಜ್ಜಾ, ಬರ್ಗರ್ ಮೇಲೆ ಶೇ 14.5ರಷ್ಟು ಟ್ಯಾಕ್ಸ್ ವಿಧಿಸಿದೆ.. ಪಿಜ್ಜಾ ಬರ್ಗರ್‌ನಿಂದಾಗುವ ಅನಾರೋಗ್ಯ ತಪ್ಪಿಸಲು ಹಾಗೂ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಆದಾಯ ಪಡೆಯಲು ಸರ್ಕಾರ  ಜಂಕ್ ಫುಡ್‌ಗಳ ಮೇಲೆ ಹೊಸ ತೆರಿಗೆ ವಿಧಿಸಿದೆ. 
 
* ಫ್ಯಾಟಿ ಟೇಸ್ಟಿ ಅಲ್ಲ.... 
ಮೊದಲು ನಾವು ಜಂಗ್ ಫುಡ್ ಕಡೆ ಗಮನಕೊಡುತ್ತೇವೆ. ನಿಮಗೆ ಜಂಕ್ ಫುಡ್ ಅಂದರೆ ರುಚಿ ರುಚಿಕರವಾದ ಆಹಾರ ಅನ್ನಿಸಬಹುದು. ಎಣ್ಣೆ ಹಾಗೂ ತುಪ್ಪದಿಂದ ಮಾಡಿದ ಆಹಾರಗಳು ಟೇಸ್ಟಿ ಅನ್ನಿಸಬಹುದು.. ಸ್ಮಾರ್ಟ್ ಅಡುಗೆ ನಿಮ್ಮ ನೆಚ್ಚಿನ ಆಹಾರದ ಸುಹಾಸನೆಯನ್ನು ಬಿಟ್ಟುಕೊಡದಂತೆ
ನೋಡಿಕೊಳ್ಳಬೇಕು.
 
* ಸಮಯಕ್ಕೆ ತಕ್ಕಂತೆ ಆಹಾರ ಸೇವನೆ..
ಸಮಯಕ್ಕೆ ತಕ್ಕಂತೆ ಆಹಾರ ಸೇವನೆ ಉತ್ತಮವಾದ ಅಭ್ಯಾಸಗಳಲ್ಲಿ ಒಂದು... ಪ್ರತಿನಿತ್ಯವು ಬ್ಯಾಲೆನ್ಸ್ ಮಾಡುವಂತಹ ಉಪಹಾರವನ್ನು ಹಾಗೂ ಪ್ರೋಟಿನ್‌ಯುಕ್ತ ಆಹಾರವನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್ಸ್ ಇರುವಂತಹ ಆಹಾರವನ್ನು, ಫ್ರೆಶ್ ಹಣ್ಣುಗಳನ್ನು ಹಾಗೂ ಕಡಿಮೆ ಡೈರಿ ಉತ್ಪನ್ನಗಳನ್ನು ಒಳಗೊಂಡ ಸಮತೋಲಿತ ಉಪಹಾರ ಅಷ್ಟೇ ಮುಖ್ಯವಾಗುತ್ತದೆ. 
 
ಅಲ್ಲದೇ ನಿಮ್ಮ ಊಟದ ಯೋಜನೆಯ ಕುರಿತು ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ... ಆರೋಗ್ಯಕರ ತಿಂಡಿಗಳನ್ನು ತಿನ್ನುವುದು ಅಭ್ಯಾಸ ರೂಢಿಸಿಕೊಳ್ಳಿ.
 
ಮಾರ್ಕೆಟ್‌ಲ್ಲಿ ಲಭ್ಯವಿರುವ ಫ್ಯಾಟ್ ಮುಕ್ತ ಆಹಾರವು ಕಡಿಮೆ ಕೊಬ್ಬು ಹಾಗೂ ಕೊಬ್ಬಿನ ಅಂಶವನ್ನು ಹೊಂದಿರುತ್ತವೆ ಎಂತಲ್ಲ. ಸಾಮಾನ್ಯವಾಗಿ ಬೊಜ್ಜನ್ನು ಕಡಿಮೆ ಮಾಡಲು ಕಡಿಮೆ ಕೊಬ್ಬಿನ ಐಟಂಗಳಲ್ಲಿ ಸೋಡಿಯಂ ಹೆಚ್ಚಿನ ಅನಾರೋಗ್ಯಕರವನ್ನು ತಂದೊಡ್ಡಬಲ್ಲದ್ದು.. 
 
ಆಹಾರ ತಜ್ಞೆ ಲಿಜಾ ಅಭಿಪ್ರಾಯದಂತೆ..ಶೂಗರ್ ಫ್ಯಾಟ್ ಚಾಕಲೇಟ್‌ಗಳು ಎಂದರೆ ಕಡಿಮೆ ಕೊಬ್ಬು ಇರುವಂತಹ ಚಾಕಲೇಟ್‌ಗಳು ಮಾರ್ಕೆಟ್‌ಲ್ಲಿ ಲಭ್ಯವಿರುತ್ತವೆ. ಆದ್ರೆ ಪ್ರತ್ಯೇಕವಾಗಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಯಾವುದೇ ಕೊಬ್ಬು ರಹಿತ ಆಹಾರ ಸೇವಿಸುವ ಮುನ್ನ ಇದು ನೆನಪಿನಲ್ಲಿಡುವುದು ಉತ್ತಮ, ಬಿಳಿ ಸಕ್ಕರೆ, ಬೆಲ್ಲಾ ಹಾಗೂ ಕರಿದ ತಿಂಡಿಗಳಿಗಿಂತ ತಾಜಾ ಹಣ್ಣಿನ ಜ್ಯೂಸ್‌ನಲ್ಲಿ ನ್ಯಾಚುರಲ್ ಶುಗರ್ ಅಂಶವಿರುತ್ತದೆ. 
 
ಇನ್ನೂ ಬಾದಾಮಿ,ಪಿಸ್ತಾ, ಸೂರ್ಯಕಾಂತಿ ಬೀಜಗಳನ್ನು ಹೊಂದಿರುವ ಆಹಾರಗಳು ಆರೋಗ್ಯಕರ ಹಾಗೂ ಅಗತ್ಯ ಕೊಬ್ಬು ಒದಗಿಸುತ್ತವೆ. 
 
* ಹೊರಗಡೆ ತಿನ್ನುವಾಗ ಊಟದ ಕಡೆ ಗಮನವಿರಲಿ:
ಗ್ರೇವಿಯಿಂದ ಮಾಡಿದ ಆಹಾರಗಳನ್ನು ತ್ಯಜಿಸುವುದು ಉತ್ತಮ.. ದಾಲ್, ರೊಟಿ, ತುಪ್ಪದಿಂದ ಮಾಡಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ.. ಸಿಹಿ ಪದಾರ್ಥಗಳನ್ನು ತಿನ್ನುವಂತಿದ್ದರೆ ಇಬ್ಬರು ಅಥವಾ ಮೂರು ಜನರ ಜತೆಗೆ ಶೇರ್ ಮಾಡಿಕೊಂಡು ತಿನ್ನುವುದು ಉತ್ತಮ ಎಂದು ಲೈಫ್‌ಸ್ಟೈಲ್ ಮ್ಯಾನೇಜ್‌ಮೆಂಟ್ ತಜ್ಞೆಯೊಬ್ಬರು ಸಲಹೆ ನೀಡುತ್ತಾರೆ. ದಿನಕ್ಕೆ ಹೆಚ್ಚು ನೀರು ಕುಡಿಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ