ಚರ್ಮದ ಮೇಲಿನ ಕಲೆಗಳ ನಿವಾರಣೆಗೆ

ಶುಕ್ರವಾರ, 21 ನವೆಂಬರ್ 2014 (14:42 IST)
ಬೇವಿನ ಎಣ್ಣೆಯನ್ನು ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತವೆ.
 
ನಿಂಬೆ ಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆದೊಂದಿಗೆ ಮಿಶ್ರ ಮಾಡಿ ರಾತ್ರಿ ಮಲಗುವಾಗ ಈ ಮಿಶ್ರ ತೈಲವನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿದರೆ ದಿನಕ್ರಮೇಣ ಕೂದಲು ಕಪ್ಪಾಗಿ ಕಾಂತಿಯುತವಾಗುತ್ತವೆ.
 
ಒಂದು ತುಂಡು ಸೇಬಿನಿಂದ ವಸಡು ಮತ್ತು ಹಲ್ಲುಗಳನ್ನು ಮೆದುವಾಗಿ ತಿಕ್ಕಿದರೆ ಹಲ್ಲುಗಳು ಕಾಂತಿಯುತವಾಗಿ ಕಾಣುತ್ತವೆ.
 
ಚಳಿಗೆ ಮುಖದ ಚರ್ಮ ಒಡೆದರೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಗುಣವಾಗುವುದು.
ರಕ್ತದ ಒತ್ತಡ ಹೆಚ್ಚಾಗಿರುವ ರೋಗಿಗಳು ಬೆಳ್ಳುಳ್ಳಿಯನ್ನು ಖಂಡಿತವಾಗಿ ಬಳಸಲೇಬೇಕು.
 
ಬಾಳೆ ಕಾಯಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣವೇ ನಿಲ್ಲುವುದು. 
ಹಾಲಿನಲ್ಲಿ ಪರಂಗಿ ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಹೆಚ್ಚು ಶಕ್ತಿ ಬರುತ್ತದೆ.

ವೆಬ್ದುನಿಯಾವನ್ನು ಓದಿ