ಬ್ರಷ್ ಮಾಡುವ ಮೊದಲು ಕಾಫಿ ಕುಡಿಯುತ್ತೀರೆಂದರೆ ಇದನ್ನು ಓದಿ

Krishnaveni K

ಮಂಗಳವಾರ, 21 ಮೇ 2024 (15:23 IST)
ಬೆಂಗಳೂರು: ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಮುನ್ನವೇ ಒಂದು ಕಾಫಿ ಅಥವಾ ಚಹಾ ಸೇವನೆ ಮಾಡಲೇಬೇಕು. ಆದರೆ ಇದು ನಿಜಕ್ಕೂ ಆರೋಗ್ಯಕರ ಅಭ್ಯಾಸವೇ ಎಂಬ ಅನುಮಾನವ ಹಲವರಲ್ಲಿದೆ. ಇದಕ್ಕೆ ಇಲ್ಲಿದೆ ಉತ್ತರ.

ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಮುನ್ನವೇ ಕಾಫಿ ಕುಡಿಯುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯದೇ ಇದ್ದರೆ ದಿನವೆಲ್ಲಾ ಸರಿಯಿರಲ್ಲ ಎನ್ನುವ ಕಲ್ಪನೆಯಿರುತ್ತದೆ. ಏನೋ ಕಳೆದುಕೊಂಡವರಂತೆ ಆಡುತ್ತಾರೆ. ಆದರೆ ನಿಜಕ್ಕೂ ಹಲ್ಲುಜ್ಜುವ ಮುನ್ನ ಕಾಫಿ ಕುಡಿಯುವುದು ಆರೋಗ್ಯಕರವೇ ಎಂದು ಯೋಚಿಸುವುದೇ ಇಲ್ಲ.

ಹಲ್ಲುಜ್ಜುವ ಮುನ್ನವೇ ಕಾಫಿ ಸೇವನೆ ಮಾಡುವುದರಿಂದ ಕಾಫಿಯಲ್ಲಿರುವ ರಂಗು ನಿಮ್ಮ ಹಲ್ಲಿಗೆ ಅಂಟಿಕೊಂಡು ಹಲ್ಲು ಹಳದಿಗಟ್ಟಬಹುದು. ಕೆಲವರು ಕಾಫಿ ಕುಡಿದು ಎಷ್ಟೋ ಸಮಯದ ನಂತರ ಹಲ್ಲುಜ್ಜುತ್ತಾರೆ. ಇದರಿಂದ ಹಲ್ಲಿನಲ್ಲಿ ಹುಳುಕಾಗುವ ಸಾಧ‍್ಯತೆ ಹೆಚ್ಚು. ಜೊತೆಗೆ ಹಲ್ಲುಜ್ಜುವ ಮುನ್ನವೇ ಕಾಫಿ ಸೇವಿಸುವುದರಿಂದ ಅಸಿಡಿಕ್ ಅಂಶವೂ ಹೆಚ್ಚಾಗಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಒಂದು ವೇಳೆ ನಿಮಗೆ ಹಲ್ಲುಜ್ಜುವ ಮುನ್ನ ಕಾಫಿ ಕುಡಿಯಲೇಬೇಕೆಂದಿದ್ದರೆ ಕಾಫಿ ಸೇವಿಸಿದ ಅರ್ಧಗಂಟೆ ಒಳಗೇ ಹಲ್ಲುಜ್ಜುವುದು ಉತ್ತಮ. ಆಗ ಹಲ್ಲಿಗೆ ಆಗಬಹುದಾದ ಹಾನಿ ತಪ್ಪಿಸಬಹುದು. ಇಲ್ಲದೇ ಹೋದರೆ ಹಲ್ಲುಜ್ಜಿದ ಅರ್ಧಗಂಟೆ ಬಳಿಕ ಕಾಫಿ ಸೇವನೆ ಮಾಡಿದರೆ ಸಮಸ್ಯೆಯಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ