ಬೆಂಗಳೂರು: ತಣ್ಣೀರಲ್ಲಿ ಸ್ನಾನ ಮಾಡುವುದರಿಂದ ಶೀತವಾಗುತ್ತೆ ಎನ್ನುವವರು ಒಮ್ಮೆ ಇದನ್ನು ಓದಲೇಬೇಕು. ತಣ್ಣೀರಿನ ಸ್ನಾನದ ಲಾಭವೇನು ಗೊತ್ತಾ?
70 ಡಿಗ್ರಿ ಎಫ್ ಗಿಂತ ಕಡಿಮೆ ಉಷ್ಣತೆಯಿರುವ ನೀರನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ತಣ್ಣೀರಿನ ಶವರ್ ಸ್ನಾನ ಒತ್ತಡ ಮರೆತು ಹಗುರವಾಗಿರಲು ಸಹಾಯ ಮಾಡುತ್ತದಂತೆ.
ಸ್ಥೂಲ ದೇಹಿಗಳು ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಈ ರೀತಿ ತಣ್ಣೀರ ಸ್ನಾನ ಮಾಡುವುದರಿಂದ ದೇಹದ ಮೆಟಾಬೋಲಿಸಂ ಚುರುಕುಗೊಂಡು ದೇಹ ಸದೃಢವಾಗುತ್ತದೆ. ತಣ್ಣೀರಿನ ಸ್ನಾನ ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ, ಇದು ದೇಹದ ಉಷ್ಣತೆಯನ್ನು ಕಾಪಾಡಿ, ಸಾಮಾನ್ಯ ರೋಗಗಳಾದ ಶೀತ, ಜ್ವರವನ್ನೂ ದೂರ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.