ಆರೋಗ್ಯವಂತ ವೀರ್ಯಾಣು ಬೇಕಾದರೆ ಹೀಗೆ ಮಾಡಿ!
ಸೋಮವಾರ, 22 ಅಕ್ಟೋಬರ್ 2018 (09:18 IST)
ಬೆಂಗಳೂರು: ಪುರುಷರ ವೀರ್ಯಾಣುವಿನ ಆರೋಗ್ಯ ಕಾಪಾಡಬೇಕಾದರೆ ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಸಾಕು.
ತೂಕ ಕಳೆದುಕೊಳ್ಳಿ
ಬೊಜ್ಜು ಬೆಳೆಸಿಕೊಂಡಿದ್ದರೆ ಸರಿಯಾದ ವ್ಯಾಯಾಮ ಮಾಡಿ ತೂ ಕಳೆದುಕೊಳ್ಳಿ. ಸಮವಾದ ತೂಕವಿದ್ದರೆ ವೀರ್ಯಾಣುವಿನ ಆರೋಗ್ಯವೂ ಚೆನ್ನಾಗಿರುತ್ತದೆ.
ಪೋಷಕಾಂಶಗಳು
ಆರೋಗ್ಯವಂತ ವೀರ್ಯಾಣು ಬೇಕಾದರೆ ವಿಟಮಿನ್ ಡಿ,ಸಿ, ಇ ಮುಂತಾದ ಪೋಷಕಾಂಶಗಳು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರಬೇಕು.
ದುರಾಭ್ಯಾಸ ಬಿಡಿ
ಮದ್ಯಪಾನ, ಧೂಮಪಾನದಂತಹ ದುಶ್ಚಟಗಳು ವೀರ್ಯಾಣುವಿನ ಆರೋಗ್ಯ ಹಾಳು ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಒಳ ಉಡುಪು
ಸಡಿಲವಾದ, ಕಂಪರ್ಟೇಬಲ್ ಆದ ಒಳ ಉಡುಪು ಧರಿಸಿ. ಗುಪ್ತಾಂಗದ ಆರೋಗ್ಯವೂ ಆರೋಗ್ಯವಂತ ವೀರ್ಯಾಣು ಉತ್ಪತ್ತಿಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.