ದಿನಕ್ಕೆ ಐದು ಗಂಟೆಗಿಂತಲೂ ಹೆಚ್ಚು ಬೈಕ್ ಬಿಡುವ ಪುರುಷರೇ ಎಚ್ಚರ!
ವಿಪರೀತ ಬೈಕ್ ಬಿಡುವ ಅಭ್ಯಾಸವಿದ್ದರೆ ಅಂತಹ ಪುರುಷರ ವೀರ್ಯಾಣುಗೆ ಕುತ್ತು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಪುರುಷರಲ್ಲಿ ಪ್ರತಿ ಮಿಲಿಲೀಟರ್ ಗೆ 40 ರಿಂದ 300 ಮಿಲಿಯನ್ ವೀರ್ಯಾಣು ಇರಬೇಕು. ಆದರೆ ತುಂಬಾ ಹೊತ್ತು ಬೈಕ್ ಚಲಾಯಿಸುವ ಖಯಾಲಿ ಇರುವ ಪುರುಷರಲ್ಲಿ ಆ ಭಾಗಕ್ಕೆ ಒತ್ತಡ ಬೀಳುವುದರಿಂದ ವೀರ್ಯಾಣುವಿನ ಉತ್ಪತ್ತಿಗೆ ಕುತ್ತು ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.