ಬೆಂಗಳೂರು: ಉಪ್ಪಿನಕಾಯಿ ಹೆಚ್ಚು ತಿನ್ನಬೇಡ, ಆರೋಗ್ಯ ಹಾಳಾಗುತ್ತದೆ! ಹೀಗಂತ ಎಲ್ಲರೂ ಎಚ್ಚರಿಕೆ ನೀಡುವುದನ್ನು ಕೇಳಿದ್ದೇವೆ. ಆದರೆ ನಿಜವಾಗಿಯೂ ಉಪ್ಪಿನಕಾಯಿ ನಮ್ಮ ಆರೋಗ್ಯ ಹಾಳು ಮಾಡುತ್ತದಾ?
ಉಪ್ಪಿನಕಾಯಿ ತಿಂದರೆ ಅಸಿಡಿಟಿ, ಹೊಟ್ಟೆ ಹುಣ್ಣು ಬರುತ್ತದೆ ಎಂಬ ನಂಬಿಕೆಗಳಿವೆ. ಒಂದು ಮಟ್ಟಿಗೆ ಇದು ನಿಜವೇ ಇರಬಹುದು. ಯಾಕೆಂದರೆ ಅತಿಯಾದರೆ ಅಮೃತವೂ ವಿಷವೇ. ಆದರೆ ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯಕ್ಕೆ ಲಾಭವೂ ಇದೆ ಗೊತ್ತಾ?
ನಿಮಗೆ ಅಚ್ಚರಿಯೆನಿಸಬಹುದು. ಇದರಲ್ಲಿ ಆರೋಗ್ಯಕರ ಆಂಟಿ ಆಕ್ಸಿಡೆಂಟ್, ಪೋಷಕಾಂಶಗಳಿದ್ದು, ಕೆಲವೊಂದು ಕ್ಯಾನ್ಸರ್ ಗಳನ್ನೂ ದೂರಮಾಡಬಹುದು! ಅಷ್ಟೇ ಅಲ್ಲ ವಿಟಮಿನ್ ಸಿ, ಎ ಹೇರಳವಾಗಿದ್ದು, ತೂಕ ಇಳಿಸಲು, ರಕ್ತದಲ್ಲಿ ಮಧುಮೇಹದ ಅಂಶ ಕಡಿಮೆ ಮಾಡುವುದು, ಬೆಳಗಿನ ತಲೆ ಸುತ್ತು, ವಾಕರಿಕೆ ಮುಂತಾದ ಸಮಸ್ಯೆಗಳನ್ನು ದೂರ ಮಾಡುವ ಗುಣವಿದೆಯಂತೆ! ಹಾಗಾಗಿ ತಪ್ಪು ಕಲ್ಪನೆ ಬಿಟ್ಟು ಮಿತವಾಗಿ ಉಪ್ಪಿನಕಾಯಿ ನೆಚ್ಚಿಕೊಳ್ಳಲು ಅಡ್ಡಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.