* ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಕೆಂಪು ಮೆಣಸಿನಕಾಯಿ, ಕಾಳು ಮೆಣಸು, ಕೊತ್ತಂಬರಿ ಕಾಳು, ಮೆಂತೆ ಕಾಳು, ಹುಣಸೆ ಹಣ್ಣು ಹಾಕಿ ಹುರಿದುಕೊಳ್ಳಿ.
* ಒಂದು ಮಿಕ್ಸಿಯಲ್ಲಿ ಹುರಿದ ಮಸಾಲೆ ಮತ್ತು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ತೆಂಗಿನ ತುರಿಯನ್ನು ಹಾಕಿ ಹುರಿದು, ರುಬ್ಬಿಕೊಳ್ಳಿ.
* ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಚಿಕನ್ ತುಂಡುಗಳು ಹಾಕಿ 5 ನಿಮಿಷ ಹುರಿಯಿರಿ. ನಂತರ ಉಪ್ಪು, ಅರಿಶಿಣ ಪುಡಿ ಹಾಕಿ ಮಿಶ್ರಣ ಮಾಡಿ 5 ನಿಮಿಷ ಹುರಿಯಿರಿ.