ಬೆಂಗಳೂರು : ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಖಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಇದು ತೂಕ ಇಳಿಸಲು ಉತ್ತಮವಾದರೂ ಕೂಡ ಇದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳಾಗುತ್ತದೆ.
ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿದರೆ ಇದು ಅನಗತ್ಯ ಕೊಬ್ಬು, ಆಮ್ಲೀಯತೆ ಮತ್ತು ಟಿನ್ನಿಟಸ್ (tinnitus) ಅಥವಾ ಕಿವಿಗಳಲ್ಲಿ ಗುಂಯ್ಗುಡುವ ತೊಂದರೆಯನ್ನು ತಂದಿಡುತ್ತದೆ.
ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ