ಯೋನಿ ಸೋಂಕು ನಿವಾರಣೆಗೆ ತೆಂಗಿನ ಎಣ್ಣೆ ಹಚ್ಚಿಕೊಳ್ಳಬಹುದೇ?
ಭಾನುವಾರ, 24 ಮಾರ್ಚ್ 2019 (10:44 IST)
ಬೆಂಗಳೂರು : ಕೆಲವು ಮಹಿಳೆಯರು ಯೋನಿ ಸೋಂಕಿನಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ಮನೆಮದ್ದಿನಿಂದ ಕೂಡ ನಿವಾರಿಸಿಕೊಳ್ಳಬಹುದು. ಈ ಸೋಂಕು ನಿವಾರಿಸಲು ತೆಂಗಿನ ಎಣ್ಣೆ ಒಂದು ನೈಸರ್ಗಿಕವಾದ ಮನೆಮದ್ದಾಗಿದೆ.
ಪ್ರಯೋಗಾಲಯಗಳಲ್ಲಿ ನಡೆಸಿರುವಂತಹ ಪರೀಕ್ಷೆಯ ಪ್ರಕಾರ ತೆಂಗಿನ ಎಣ್ಣೆಯ ತುಂಬಾ ಸುಲಭವಾಗಿ ಶಿಲೀಂಧ್ರ ಕೋಶದ ನ್ಯೂಕ್ಲಿಯಸ್ ನ್ನು ಸ್ಫೋಟ ಮಾಡಬಲ್ಲದು. ಇದರಿಂದ ಯೋನಿ ಭಾಗದ ಕಿರಿಕಿರಿ ಮತ್ತು ಉರಿಯೂತವನ್ನು ಕಡಿಮೆಯಾಗುವುದು. ಶಿಲೀಂಧ್ರ ಸೋಂಕು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಆಗಿದೆ.
ಮೊದಲಿಗೆ ನೀವು ಶಿಲೀಂಧ್ರ ಸೋಂಕು ಇರುವಂತಹ ಜಾಗವನ್ನು ಸ್ವಚ್ಛ ಮಾಡಿಕೊಳ್ಳಿ ಮತ್ತು ಅದು ಒಣಗಲು ಬಿಡಿ. ಇದರ ಬಳಿಕ ಕೆಲವು ಹನಿ ತೆಂಗಿನ ಎಣ್ಣೆ ತೆಗೆದುಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ದಿನದಲ್ಲಿ ಎರಡರಿಂದ ಮೂರು ಸಲ ನೀವು ಹೀಗೆ ಮಾಡಿದರೆ ಅದರಿಂದ ಶಿಲೀಂಧ್ರ ಸೋಂಕು ನಿವಾರಣೆ ಆಗುವುದು. ನೀವು ಕೆಲವು ವಾರಗಳ ತನಕ ಇದನ್ನು ನಿಯಮಿತವಾಗಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.