ಬೆಂಗಳೂರು : ಅನಾನಸ್ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಇದರಿಂದ ಬೇಸಿಗೆಯಲ್ಲಿ ಕಾಡುವ ಸನ್ ಟ್ಯಾನ್ ಗಳಿಂದ ಮುಕ್ತಿ ಹೊಂದಬಹುದು. ಇದರಲ್ಲಿರುವ ವಿಟಮಿನ್ ಸಿ ಚರ್ಮವನ್ನು ಪೋಷಿಸಲು ಸಹಕಾರಿಯಾಗಿದೆ.
1 ಕಪ್ ಅನಾನಸ್ ತಿರುಳಿಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಅದನ್ನು 20 ನಿಮಿಷಗಳ ಕಾಲ ಇಟ್ಟು ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ. ಇದರಿಂದ ಸನ್ ಟ್ಯಾನ್ ನಿಂದ ತ್ವರಿತ ಪರಿಣಾಮ ಬೀರುತ್ತದೆ.