ಹೆರಿಗೆ ನಂತರ ಬಹುತೇಕ ಮಹಿಳೆಯರು ತೂಕ ಹೆಚ್ಚಳವಾಗುತ್ತಿದೆ ಎಂದು ಚಿಂತಿತರಾಗುತ್ತಾರೆ. ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು ಗೊತ್ತಾ?
ಹೆರಿಗೆ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೋನ್ ಹಾರ್ಮೋನ್ ಉತ್ಪತ್ತಿ ದಿಡೀರ್ ಕುಂಠಿತವಾಗುತ್ತದೆ. ಅದರ ಬದಲು ಹಾಲು ಉತ್ಪತ್ತಿ ಮಾಡುವ ಪ್ರೊಲ್ಯಾಕ್ಟಿನ್ ಹಾರ್ಮೋನ್ ಬಿಡುಗಡೆ ಪ್ರಮಾಣ ಹೆಚ್ಚಳವಾಗುತ್ತದೆ. ಈ ಬದಲಾವಣೆ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆ ತರಬಹುದು. ಕೆಲವರಿಗೆ ಹೆರಿಗೆ ನಂತರ ಸಕ್ಕರೆ ಅಂಶ ಸಂಸ್ಕರಿಸುವ ವಿಚಾರದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
ಹೆರಿಗೆ ನಂತರ ಮಗುವಿನ ಆರೈಕೆಗಾಗಿ ನಿಮ್ಮ ನಿದ್ರಿಸುವ ಅವಧಿಯಲ್ಲಿ ಬದಲಾವಣೆಯಾಗುತ್ತದೆ. ನಿದ್ರಾಹೀನತೆ, ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸೋಲ್ ಲೆವೆಲ್ ಹೆಚ್ಚಲು ಕಾರಣವಾಗುತ್ತದೆ. ಇದು ನೇರವಾಗಿ ಕೆಳಹೊಟ್ಟೆಯಲ್ಲಿ ಕೊಬ್ಬು ಸಂಗ್ರಹಣೆಯಾಗಲು ಮತ್ತು ಅತಿಯಾದ ಬಾಯಿ ಚಪಲವುಂಟು ಮಾಡುತ್ತದೆ.
ಮಗುವಿಗೆ ಹಾಲುಣಿಸುವಾಗ ಹೆಚ್ಚು ಹಸಿವು ಆಗಬಹುದು. ಆಗ ಹೆಚ್ಚು ಕ್ಯಾಲೊರಿ ಇರುವ ಆಹಾರಗಳನ್ನು ಸೇವನೆ ಮಾಡುತ್ತೀರಿ. ಜೊತೆಗೆ ಈ ಸಮಯದಲ್ಲಿ ವ್ಯಾಯಾಮಕ್ಕಿಂತ ಹೆಚ್ಚು ವಿಶ್ರಾಂತಿಯೇ ತೆಗೆದುಕೊಳ್ಳುವುದರಿಂದ ದಪ್ಪ ಆಗುವ ಸಾಧ್ಯತೆ ಹೆಚ್ಚಿರುತ್ತದೆ.