ರಾತ್ರಿ ಮೊಸರು ಸೇವಿಸಬಾರದೇ?

ಶನಿವಾರ, 5 ಆಗಸ್ಟ್ 2017 (09:08 IST)
ಬೆಂಗಳೂರು: ಊಟದ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಮೊಸರು ಸೇವನೆ ಮಾಡುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ಆರೋಗ್ಯಕ್ಕೇನಾದರೂ ಸಮಸ್ಯೆಯಾಗಬಹುದಾ?


ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮೊಸರು ಸೇವನೆ ತಪ್ಪೇನಲ್ಲ. ಇದರಿಂದ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಯೇನೂ ಆಗದು. ಹಾಗಿದ್ದರೂ ಶೀತ ಪ್ರಕೃತಿ ಇರುವವರು ರಾತ್ರಿ ಮೊಸರು ಸೇವನೆ ಮಾಡಬಾರದು ಎನ್ನುತ್ತಾರೆ.

ಶೀತ ಪ್ರಕೃತಿ ದೇಹ ಹೊಂದಿರುವವರು ರಾತ್ರಿ ಮೊಸರು ಸೇವಿಸುವುದರಿಂದ ಕಫ ಹೆಚ್ಚುವುದು. ಹೀಗಾಗಿ ಮೊಸರು ಪಕ್ಕಕ್ಕಿಡುವುದೇ ಉತ್ತಮ.

ಹಾಗಿದ್ದರೂ ಇತರರು ಮೊಸರು ಸೇವಿಸುವಾಗ ಸ್ವಲ್ಪ ಮೆಂತೆ ಅಥವಾ ಜೀರಿಗೆ ಪುಡಿ ಹಾಕಿಕೊಂಡು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ