ಸಲಾಡ್ ಗಳನ್ನು ರಾತ್ರಿ ಹೊತ್ತು ಸೇವಿಸಬಹುದೇ ಎಂಬ ಅನುಮಾನಕ್ಕೆ ಇಲ್ಲಿದೆ ಉತ್ತರ

Krishnaveni K

ಗುರುವಾರ, 7 ಮಾರ್ಚ್ 2024 (13:12 IST)
Photo Courtesy: Twitter
ಬೆಂಗಳೂರು: ತರಕಾರಿ, ಹಣ್ಣುಗಳನ್ನು ಬಳಸಿ ಮಾಡುವ ಸಲಾಡ್ ಗಳನ್ನು ರಾತ್ರಿ ಹೊತ್ತು ಸೇವಿಸಬಹುದೇ ಎಂದು ಅನೇಕರಿಗೆ ಅನುಮಾನಗಳಿರುತ್ತವೆ. ಅದಕ್ಕೆ ಇಲ್ಲಿದೆ ಉತ್ತರ.

ಕೆಲವರಿಗೆ ರಾತ್ರಿ ಹೊತ್ತು ಲೈಟ್ ಫುಡ್ ಬಳಸಿ ಅಭ್ಯಾಸ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ ಕೂಡಾ ಹೌದು. ರಾತ್ರಿ ಹೊತ್ತು ದೈಹಿಕವಾಗಿ ಹೆಚ್ಚು ಚಟುವಟಿಕೆಯಿಲ್ಲದ ಕಾರಣ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕು ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಸಲಾಡ್ ಗಳನ್ನು ಸೇವಿಸಬಹುದೇ ಎಂದು ಅನೇಕರಿಗೆ ಅನುಮಾನಗಳಿರುತ್ತವೆ.

ಮೊಳಕೆ ಕಾಳು, ದಾಳಿಂಬೆ, ಕಾರ್ನ್ ಇತ್ಯಾದಿಗಳನ್ನು ಬಳಸಿ ಮಾಡುವ ಸಲಾಡ್ ಗಳನ್ನು ರಾತ್ರಿ ಹೊತ್ತು ಖಂಡಿತಾ ಸೇವಿಸಬಹುದು. ಇದನ್ನು ಸೇವಿಸಿದರೇ ನಿಮ್ಮ ದೇಹ ಇನ್ನಷ್ಟು ಆರೋಗ್ಯವಾಗಿರುತ್ತದೆ. ಯಾಕೆಂದರೆ ಸಲಾಡ್ ನಲ್ಲಿ ಫೈಬರ್ ಅಂಶ ಹೆಚ್ಚಿರುವ ಪದಾರ್ಥಗಳನ್ನು ನಾವು ಬಳಸಿರುತ್ತೇವೆ.

ಫೈಬರ್ ಅಂಶ ನಮ್ಮ ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಹೀಗಾಗಿ ರಾತ್ರಿ ಸುಲಭವಾಗಿ ಜೀರ್ಣವಾಗಲು ಸಲಾಡ್ ಗಳು ಉತ್ತಮ. ಜೊತೆಗೆ ಇವುಗಳಲ್ಲಿ ಜಿಡ್ಡು ಇತ್ಯಾದಿ ಅಂಶ ಇಲ್ಲದೇ ಇರುವುದರಿಂದ ಅಸಿಡಿಟಿ, ಹೊಟ್ಟೆ ಭಾರವಾಗುವುದು ಇತ್ಯಾದಿ ಸಮಸ್ಯೆಯೂ ಇರಲ್ಲ. ಅದರಲ್ಲೂ ತೂಕ ಇಳಿಕೆಗೆ ಪ್ರಯತ್ನಿಸುವವರಿಗಂತೂ ಇದು ತುಂಬಾ ಉತ್ತಮ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ