ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಎಳೆನೀರು ಕುಡಿದು ನೋಡಿ

Krishnaveni K

ಶನಿವಾರ, 2 ಮಾರ್ಚ್ 2024 (12:56 IST)
Photo Courtesy: facebook
ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಎಳೆನೀರು ಕುಡಿಯುವುದರಿಂದ ಎಷ್ಟು ಲಾಭವಿದೆ ಎಂದು ತಿಳಿದರೆ ನೀವು ಖಂಡಿತಾ ಇದನ್ನು ಸೇವಿಸುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗಿದ್ದರೆ ಖಾಲಿ ಹೊಟ್ಟೆಯಲ್ಲಿ ಎಳೆನೀರು ಕುಡಿಯುವುದರ ಪ್ರಯೋಜನಗಳೇನು ನೋಡೋಣ.

ಎಳೆನೀರಿನಲ್ಲಿ ದೇಹಕ್ಕೆ ಬೇಕಾದ ಶಕ್ತಿ ಒದಗಿಸುವ ಗುಣವಿದೆ. ಇದು ಗ್ಲುಕೋಸ್ ನಂತೆ ಕೆಲಸ ಮಾಡುತ್ತದೆ. ಹೀಗಾಗಿ ನಿಶ್ಯಕ್ತಿ ಇರುವವರಿಗೆ ತಪ್ಪದೇ ಎಳೆನೀರು ಕೊಡಲಾಗುತ್ತದೆ. ಅದರಲ್ಲೂ ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಎಳೆ ನೀರು ಕುಡಿದರೆ ಅದರ ಪ್ರಯೋಜನ ಡಬಲ್ ಆಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಎಳೆನೀರನ್ನು ಸೇವಿಸುವುದರಿಂದ ನಮ್ಮ ಚಯಾಪಚಯ ಕ್ರಿಯೆಗಳು ಸುಧಾರಿಸುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಎಳೆ ನೀರು ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಖಾಲಿ ಹೊಟ್ಟೆಯಲ್ಲಿ ಎಳೆನೀರು ಸೇವಿಸುವುದರಿಂದ ದೇಹ ನಿರ್ಜಲೀಕರಣವಾಗುವುದನ್ನು ತಡೆಯಬಹುದು.

ಎಳೆ ನೀರು ಹೊಟ್ಟೆಯ ಕಲ್ಮಶಗಳನ್ನು ದೂರ ಮಾಡಿ ಹೊಸ ಚೈತನ್ಯ ನೀಡುವ ಶಕ್ತಿ ಹೊಂದಿದೆ. ಹೀಗಾಗಿ ಬೆಳಗಿನ ಹೊತ್ತು ಎಳೆನೀರು ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ದೂರವಾಗಿ ಹೊಟ್ಟೆ ಕ್ಲೀನ್ ಆಗುತ್ತದೆ. ಜೊತಗೆ ಮೂತ್ರ ಸಂಬಂಧೀ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಇನ್ನು ಮಹಿಳೆಯರಿಗೆ ಪಿರಿಯಡ್ಸ್ ಸಮಯಲ್ಲಿ ಬಾಡಿ ಹೀಟ್ ತಡೆಯಲು, ನಿಶ್ಯಕ್ತಿಯಾಗದಂತೆ ತಡೆಯಲು ಎಳೆ ನೀರು ಸಹಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ