ಸಪೋಟ ಸೇವಿಸಿ; ತೂಕ ಇಳಿಸಿ

ಶುಕ್ರವಾರ, 19 ಮಾರ್ಚ್ 2021 (07:36 IST)
ಬೆಂಗಳೂರು : ಚಿಕ್ಕು ಹಣ್ಣು ಬಹಳ ಸಿಹಿಯಾದ ಎಲ್ಲರೂ ಇಷ್ಟಪಡುವಂತಹ ಹಣ್ಣು. ಈ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.  ಹಾಗಾದ್ರೆ ಚಿಕ್ಕು ಹಣ್ಣಿನ ಸೇವನೆಯಿಂದ ತೂಕವನ್ನು ನಿಯಂತ್ರಿಸಬಹುದೇ? ಇದಕ್ಕೆ ಉತ್ತರ ಇಲ್ಲಿದೆ.

ಚಿಕ್ಕು ತೂಕ ನಿಯಂತ್ರಿಸಲು ಸಹಕಾರಿ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಇದು ದೇಹವನ್ನು ವಿಷಕಾರಿ ಕಣಗಳಿಂದ ಮುಕ್ತಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನು ಸೇವಿಸುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಹೆಚ್ಚು ಹಸಿವಾಗುವುದಿಲ್ಲ. ಹಾಗಾಗಿ ಇದರಿಂದ ಅತಿಯಾಗಿ ತಿನ್ನುವುದು ಕಡಿಮೆಯಾಗಿ ತೂಕ ನಿಯಂತ್ರಣದಲ್ಲಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ