ಬೆಂಗಳೂರು : ಕಡಲೆಕಾಯಿ ಆರೋಗ್ಯ ಉತ್ತಮ. ಮಾತ್ರವಲ್ಲ ಇದರಿಂದ ನಮ್ಮ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಕಡಲೆಕಾಯಿಯಿಂದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ½ ಕಪ್ ಕಡಲೆಕಾಯಿ ಪೇಸ್ಟ್, 4 ಚಮಚ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿಟ್ಟುಕೊಳ್ಳಿ.
ನಂತರ ಮುಖವನ್ನು ಹಾಲಿನಿಂದ ಸ್ವಚ್ಛಗೊಳಿಸಿ ಈ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ಬಿಟ್ಟು ಒಣಗಿದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.